udupixpress
Home Trending ಕೇಂದ್ರದಿಂದ ಅನ್ ಲಾಕ್‌4.0 ಘೋಷಣೆ:ಯಾವುದಕ್ಕೆಲ್ಲಾ ಅನುಮತಿ?

ಕೇಂದ್ರದಿಂದ ಅನ್ ಲಾಕ್‌4.0 ಘೋಷಣೆ:ಯಾವುದಕ್ಕೆಲ್ಲಾ ಅನುಮತಿ?

ನವದೆಹಲಿ: ಕೇಂದ್ರದಿಂದ ಅನ್ ಲಾಕ್ 4.0 ಬಿಡುಗಡೆಯಾಗಿದ್ದು, ಸೆ.7 ರಿಂದ ದೇಶಾದ್ಯಂತ ಮೆಟ್ರೋ ಸಂಚಾರ ಮತ್ತೆ ಆರಂಭವಾಗಲಿದೆ
ಸೆಪ್ಟೆಂಬರ್​​ 1ರಿಂದ ಈ ನಿಯಮ ಜಾರಿಗೊಳ್ಳಲಿದೆ, ಸೆಪ್ಟೆಂಬರ್​​ 7ರಿಂದ ದೇಶಾದ್ಯಂತ ಮೆಟ್ರೋ ರೈಲು ಸಂಚಾರ ಆರಂಭಗೊಳ್ಳಲಿದೆ. ಹಂತ ಹಂತವಾಗಿ ಬೆಂಗಳೂರು ಸೇರಿದಂತೆ ಹಲವು ಕಡೆ ಮೆಟ್ರೋ ಸಂಚಾರ ಆರಂಭವಾಗಲಿದೆ. ಇದರ ಜತೆಗೆ ಸಿನಿಮಾ ಹಾಲ್​, ಬಾರ್​ ಆ್ಯಂಡ್​ ರೆಸ್ಟೋರೆಂಟ್ ತೆರೆಯುವುದೂ ಸೇರಿದಂತೆ ಅನೇಕ ಸಡಿಲಿಕೆ ನೀಡಿ ಕೇಂದ್ರ ಸರ್ಕಾರ ಮಹತ್ವದ ಮಾರ್ಗಸೂಚಿ ಪ್ರಕಟಿಸಿದೆ.ಇನ್ನು ಸೆಪ್ಟೆಂಬರ್‌ 30ರವರೆಗೆ ಶಾಲಾ, ಕಾಲೇಜುಗಳನ್ನು ತೆರೆಯುವಂತಿಲ್ಲ

ಮನೋರಂಜನಾ ಕಾರ್ಯಕ್ರಮಕ್ಕೆ ಅನುಮತಿ: ಸಾಮಾಜಿಕ, ,ಮನೋರಂಜನಾ ಕಾರ್ಯಕ್ರಮ ನಡೆಸಲು ಷರತ್ತು ಬದ್ದ ಅನುಮತಿ ನೀಡಲಾಗಿದ್ದು, 100 ಜನ ಸೇರದಂತೆ ಆದೇಶ ಹೊರಡಿಸಲಾಗಿದೆ. ಹಾಗೂ ಪಿಹೆಚ್ಡಿ ವಿದ್ಯಾರ್ಥಿಗಳ ಸಂಶೋಧನೆಗೆ ಅನುಮತಿ ನೀಡಲಾಗಿದೆ.ಥಿಯೇಟರ್ , ಮಲ್ಟಿಫೆಕ್ಸ್ , ಸ್ವಿಮ್ಮಿಂಗ್ ಫೂಲ್ ತೆರೆಯಲು ಸದ್ಯಕ್ಕಿಲ್ಲ ಅನುಮತಿ ಇರುವುದಿಲ್ಲ.ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಮನರಂಜನಾ ಪಾರ್ಕ್ ತೆರೆಯಲು ಕೂಡಾ ಅನುಮತಿ ಇಲ್ಲ.

error: Content is protected !!