ನವದೆಹಲಿ: ಕೇಂದ್ರದಿಂದ ಅನ್ ಲಾಕ್ 4.0 ಬಿಡುಗಡೆಯಾಗಿದ್ದು, ಸೆ.7 ರಿಂದ ದೇಶಾದ್ಯಂತ ಮೆಟ್ರೋ ಸಂಚಾರ ಮತ್ತೆ ಆರಂಭವಾಗಲಿದೆ
ಸೆಪ್ಟೆಂಬರ್ 1ರಿಂದ ಈ ನಿಯಮ ಜಾರಿಗೊಳ್ಳಲಿದೆ, ಸೆಪ್ಟೆಂಬರ್ 7ರಿಂದ ದೇಶಾದ್ಯಂತ ಮೆಟ್ರೋ ರೈಲು ಸಂಚಾರ ಆರಂಭಗೊಳ್ಳಲಿದೆ. ಹಂತ ಹಂತವಾಗಿ ಬೆಂಗಳೂರು ಸೇರಿದಂತೆ ಹಲವು ಕಡೆ ಮೆಟ್ರೋ ಸಂಚಾರ ಆರಂಭವಾಗಲಿದೆ. ಇದರ ಜತೆಗೆ ಸಿನಿಮಾ ಹಾಲ್, ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯುವುದೂ ಸೇರಿದಂತೆ ಅನೇಕ ಸಡಿಲಿಕೆ ನೀಡಿ ಕೇಂದ್ರ ಸರ್ಕಾರ ಮಹತ್ವದ ಮಾರ್ಗಸೂಚಿ ಪ್ರಕಟಿಸಿದೆ.ಇನ್ನು ಸೆಪ್ಟೆಂಬರ್ 30ರವರೆಗೆ ಶಾಲಾ, ಕಾಲೇಜುಗಳನ್ನು ತೆರೆಯುವಂತಿಲ್ಲ
ಮನೋರಂಜನಾ ಕಾರ್ಯಕ್ರಮಕ್ಕೆ ಅನುಮತಿ: ಸಾಮಾಜಿಕ, ,ಮನೋರಂಜನಾ ಕಾರ್ಯಕ್ರಮ ನಡೆಸಲು ಷರತ್ತು ಬದ್ದ ಅನುಮತಿ ನೀಡಲಾಗಿದ್ದು, 100 ಜನ ಸೇರದಂತೆ ಆದೇಶ ಹೊರಡಿಸಲಾಗಿದೆ. ಹಾಗೂ ಪಿಹೆಚ್ಡಿ ವಿದ್ಯಾರ್ಥಿಗಳ ಸಂಶೋಧನೆಗೆ ಅನುಮತಿ ನೀಡಲಾಗಿದೆ.ಥಿಯೇಟರ್ , ಮಲ್ಟಿಫೆಕ್ಸ್ , ಸ್ವಿಮ್ಮಿಂಗ್ ಫೂಲ್ ತೆರೆಯಲು ಸದ್ಯಕ್ಕಿಲ್ಲ ಅನುಮತಿ ಇರುವುದಿಲ್ಲ.ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಮನರಂಜನಾ ಪಾರ್ಕ್ ತೆರೆಯಲು ಕೂಡಾ ಅನುಮತಿ ಇಲ್ಲ.