ಯೂನಿಲಿವರ್ ಶ್ಯಾಂಪೂಗಳಲ್ಲಿ ಕ್ಯಾನ್ಸರ್​ ಕಾರಕಗಳು ಪತ್ತೆ: ಅಮೇರಿಕಾದಲ್ಲಿ ಉತ್ಪನ್ನಗಳನ್ನು ಹಿಂಪಡೆದ ಸಂಸ್ಥೆ

ನ್ಯೂಯಾರ್ಕ್:  ತನ್ನ ಉತ್ಪನ್ನಗಳಲ್ಲಿ ಕ್ಯಾನ್ಸರ್ ಕಾರಕಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಯೂನಿಲಿವರ್ ಪಿಎಲ್​ಸಿ ಕಂಪನಿಯು ಅಮೇರಿಕಾದಲ್ಲಿ ಡವ್ ಸೇರಿದಂತೆ ಏರೋಸಾಲ್ ಡ್ರೈ ಶ್ಯಾಂಪೂಗಳ ಜನಪ್ರಿಯ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ. ಭಾರತದಲ್ಲಿ ಇದು ಅತ್ಯಂತ ಚಿಕ್ಕ ಮಾರುಕಟ್ಟೆಯಾಗಿರುವುದರಿಂದ ಇದರ ಪರಿಣಾಮವು ಅತ್ಯಲ್ಪವಾಗಿರುತ್ತದೆ ಎಂದು ಡೋಲತ್ ಕ್ಯಾಪಿಟಲ್‌ನ ಉಪಾಧ್ಯಕ್ಷ ಸಚಿನ್ ಬೋಬಡೆ ಹೇಳಿದ್ದಾರೆ. ಬ್ಯುಸಿನೆಸ್ ಸ್ಟ್ಯಾಂಡರ್ಡ್‌ನಿಂದ ಪರಿಶೀಲಿಸಲ್ಪಟ್ಟಂತೆ ಉತ್ಪನ್ನವು ಭಾರತದಲ್ಲಿ ನೈಕಾ ಮತ್ತು ಅಮೆಜಾನ್ ನಲ್ಲಿ ಮಾರಾಟವಾಗುತ್ತಲೇ ಇದೆ.

ಈ ಶ್ಯಾಂಪೂಗಳಲ್ಲಿ ಬೆಂಜೀನ್ ಎನ್ನುವ ಕ್ಯಾನ್ಸರ್​ಕಾರಕ ಅಂಶವಿದ್ದು, ಇದು ಮಾನವನ ದೇಹವನ್ನು ಹಲವು ರೀತಿಯಲ್ಲಿ ಪ್ರವೇಶಿಸುವ ಅಪಾಯವಿದೆ ಎಂದು ಹೇಳಲಾಗಿದೆ.

ಮೂಗಿನ ಮೂಲಕ, ಬಾಯಿಯ ಮೂಲಕ ಮತ್ತು ಚರ್ಮದ ಮೂಲಕ ದೇಹವನ್ನು ಪ್ರವೇಶಿಸಬಹುದು. ಇದು ರಕ್ತದ ಕ್ಯಾನ್ಸರ್​ಗೆ ಕಾರಣವಾಗಬಹುದು. ಜನರು ಅಂತಹ ಉತ್ಪನ್ನಗಳನ್ನು ಬಳಸುವುದನ್ನು ನಿಲ್ಲಿಸಬೇಕು ಮತ್ತು ತಮ್ಮ ಹಣವನ್ನು ಮರಳಿ ಪಡೆಯಲು UnileverRecall.com ನ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಎಂದು ಎಫ್.ಡಿ.ಎ ಸೂಚಿಸಿದೆ. ಯೂನಿಲಿವರ್ ಸಂಸ್ಥೆ ಈ ಕುರಿತು ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಯೂನಿಲಿವರ್ ನೆಕ್ಸಸ್, ಸುಆವೆ, ಟ್ರೆಸೆಮಿ ಹಾಗೂ ಟಿಗಿ ನಂತಹ ಉತ್ಪನ್ನಗಳು ಒಳಗೊಂಡಿದೆ. ಕಳೆದ ಒಂದೂವರೆ ವರ್ಷಗಳಲ್ಲಿ ಹಲವು ಸನ್​ಸ್ಕ್ರೀನ್ ಲೋಷನ್​ಗಳನ್ನು ಹಿಂಪಡೆಯಲಾಗಿದೆ. ಉದಾಹರಣೆಗೆ ಜಾನ್ಸನ್ ಮತ್ತು ಜಾನ್ಸನ್‌ನ ನ್ಯೂಟ್ರೋಜೆನಾ, ಎಡ್ಜ್‌ವೆಲ್ ಪರ್ಸನಲ್ ಕೇರ್ ಕಂಪನಿಯ ಬನಾನಾ ಬೋಟ್ ಮತ್ತು ಬೈರ್ಸ್‌ಡಾರ್ಫ್ ಎಜಿಯ ಕಾಪರ್‌ಟೋನ್ ಜೊತೆಗೆ ಸ್ಪ್ರೇ-ಆನ್ ಬೆವರು ನಿರೋಧಕಗಳಾದ ಪ್ರಾಕ್ಟರ್ ಹಾಗೂ ಗ್ಯಾಂಬಲ್ ಕೋಸ್ ಸೀಕ್ರೆಟ್ ಮತ್ತು ಓಲ್ಡ್ ಸ್ಪೈಸ್ ಮತ್ತು ಯೂನಿಲಿವರ್ಸ್ ಸುಆವೆ.

Hindustan Unilever Limited - Sustainable Living Commonplace - StockEdge Blog

ಲಿಸೂರ್‌ನ ಸಂಶೋಧನೆಗಳನ್ನು ಅನುಸರಿಸಿ ಪ್ರಾಕ್ಟರ್ ಎಂಡ್ ಗ್ಯಾಂಬಲ್ ತನ್ನ ಏರೋಸಾಲ್ ಉತ್ಪನ್ನಗಳ ಸಂಪೂರ್ಣ ಪೋರ್ಟ್‌ಫೋಲಿಯೊವನ್ನು ಪರೀಕ್ಷಿಸಿದೆ. ಬೆಂಜೀನ್ ಮಾಲಿನ್ಯವನ್ನು ಉಲ್ಲೇಖಿಸಿ ಕಂಪನಿಯು ಡಿಸೆಂಬರ್‌ನಲ್ಲಿ ಅದರ ಪ್ಯಾಂಟೆನ್ ಮತ್ತು ಹರ್ಬಲ್ ಎಸೆನ್ಸಸ್ ಡ್ರೈ ಶ್ಯಾಂಪೂಗಳನ್ನು ಹಿಂತೆಗೆದುಕೊಂಡಿದೆ.

ಯೂನಿಲಿವರ್‌ನ ಕ್ರಮವು ಮತ್ತೊಮ್ಮೆ ವೈಯಕ್ತಿಕ ಆರೈಕೆ ಉತ್ಪನ್ನಗಳಲ್ಲಿ ಹಾನಿಕಾರಕ ರಾಸಾಯನಿಕಗಳ ಉಪಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ ಹಲವಾರು ಏರೋಸಾಲ್ ಸನ್‌ಸ್ಕ್ರೀನ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ.

ಇವುಗಳಲ್ಲಿ ಜಾನ್ಸನ್ ಮತ್ತು ಜಾನ್ಸನ್‌ನ ನ್ಯೂಟ್ರೋಜೆನಾ, ಎಡ್ಜ್‌ವೆಲ್ ಪರ್ಸನಲ್ ಕೇರ್ ಕಂ. ಬನಾನಾ ಬೋಟ್ ಮತ್ತು ಬೀರ್ಸ್‌ಡಾರ್ಫ್ ಎಜಿ ಯ ಕಾಪರ್‌ಟೋನ್‌ ಕೂಡ ಇತ್ತು.

ಕಳೆದ ವರ್ಷ, ಪ್ರಾಕ್ಟರ್ ಹಾಗೂ ಗ್ಯಾಂಬಲ್ 30 ಕ್ಕೂ ಹೆಚ್ಚು ಏರೋಸಾಲ್ ಸ್ಪ್ರೇ ಹೇರ್‌ಕೇರ್ ಉತ್ಪನ್ನಗಳನ್ನು ಹಿಂಪಡೆದಿದೆ. ಇವುಗಳಲ್ಲಿ ಡ್ರೈ ಶ್ಯಾಂಪೂ ಮತ್ತು ಡ್ರೈ ಕಂಡಿಷನರ್ ಸೇರಿವೆ. ಈ ಉತ್ಪನ್ನಗಳಲ್ಲಿ ಬೆಂಜೀನ್ ಇರಬಹುದು ಎಂದು ಕಂಪನಿ ಎಚ್ಚರಿಕೆ ನೀಡಿತ್ತು.

ಕಂಪನಿಯು ಹನ್ನೆರಡು ಓಲ್ಡ್ ಸ್ಪೈಸ್ ಮತ್ತು ಸೀಕ್ರೆಟ್ ಬ್ರಾಂಡ್‌ಗಳ ಡಿಯೋಡರೆಂಟ್‌ಗಳು ಮತ್ತು ಸ್ಪ್ರೇಗಳನ್ನು ಹಿಂಪಡೆದಿದೆ.