ಹಾಲಾಡಿ: ನಿರುದ್ಯೋಗಿ ಯುವಕ ಬಾವಿಗೆ ಹಾರಿ ಆತ್ಮಹತ್ಯೆ

ಕುಂದಾಪುರ: ಕೆಲಸ ಇಲ್ಲದೆ ನಿರುದ್ಯೋಗಿಯಾಗಿ ಚಿಂತೆಯಲ್ಲಿದ್ದ ಯುವಕನೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ 76 ಹಾಲಾಡಿ ಗ್ರಾಮದಲ್ಲಿ ಜೂ.12 ರಂದು ಬೆಳಿಗ್ಗೆ ನಡೆದಿದೆ.
ಮೃತರನ್ನು 76 ಹಾಲಾಡಿ ಗ್ರಾಮದ ಗೋರಾಜೆ ನಿವಾಸಿ 33 ವರ್ಷ ಪ್ರಾಯದ ಉಮೇಶ ಮಡಿವಾಳ ಎಂದು ಗುರುತಿಸಲಾಗಿದೆ.

ವ್ಯಕ್ತಿಯು ಮೊದಲು ಬೆಂಗಳೂರಿನಲ್ಲಿ ಕ್ಯಾಂಟೀನ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಊರಿಗೆ ಬಂದ ನಂತರ ಸರಿಯಾದ ಕೆಲಸವಿಲ್ಲದೆ ಮಾನಸಿಕವಾಗಿ ನೊಂದು ಮದ್ಯಪಾನ ಮಾಡುವ ಹವ್ಯಾಸ ಮೈಗೂಡಿಸಿಕೊಂಡಿದ್ದರು. ಇದೇ ಚಿಂತೆಯಲ್ಲಿ ಮನನೊಂದು ನಿನ್ನೆ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.