ಮಕ್ಕಳನ್ನು ಅರ್ಥ ಮಾಡ್ಕೊಳ್ಳಿ:ಒಂದೊಳ್ಳೆ ಪೋಷಕರಾಗಿ ನೀವೇನ್ ಮಾಡ್ಬೇಕು?

ಮಕ್ಕಳ ಮಾನಸಿಕ ಆರೋಗ್ಯಕ್ಕಾಗಿ ಹೀಗೆ ಮಾಡಿ

  • ಮಕ್ಕಳ ಮನಸ್ಸನ್ನು ಅರಿತುಕೊಂಡು ಪ್ರೀತಿಯಿಂದಲೇ ಬುದ್ಧಿ ಹೇಳಿ, ತಪ್ಪು ಕೆಲಸ ಮಾಡಿದ ಸಂದರ್ಭದಲ್ಲಿ ಒಂದೇ ಸರ್ತಿ ಬೈದು, ಹೊಡೆದು ಮಾಡುವ‌ ಬದಲು ನಿಧಾನವಾಗಿ ಅರ್ಥ ಮಾಡಿಸಿ ಆಗ ಮಕ್ಕಳು ಬೇಗ ತಪ್ಪನ್ನು ತಿದ್ದಿಕೊಳ್ಳುತ್ತಾರೆ.
  • ಇತರ ಮಕ್ಕಳೊಂದಿಗೆ ನಿಮ್ಮ ಮಕ್ಕಳನ್ನು ಹೋಲಿಸಬೇಡಿ. ಪ್ರತಿ ಮಗುವಿಗೂ ಅದರದ್ದೇ ಆದ ವಿಶೇಷ ಸಾಮರ್ಥ್ಯ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಿ.
  • ಮಕ್ಕಳ ಎದುರು ಪೋಷಕರಾದ ನೀವು ಯಾವಾಗಲೂ ಜಗಳವಾಡುತ್ತಿರಬೇಡಿ, ದಾಂಪತ್ಯ ಜೀವನದ ಕುರಿತು ಮಕ್ಕಳ ಮನಸ್ಸಲ್ಲಿ ಜಿಗುಪ್ಸೆ ಮೂಡಬಹುದು. ಭಿನ್ನಾಭಿಪ್ರಾಯಗಳು ಸಹಜ, ಅವುಗಳನ್ನು ಜಾಣ್ಮೆಯಿಂದ ಬಗೆಹರಿಸಿ.
  • ಮಕ್ಕಳ ಮೇಲೆ ನಿಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಹೇರಿಕೆ ಮಾಡಬೇಡಿ. ಮಕ್ಕಳ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಿ

ಕೊನೆಯದಾಗಿ ಕೇವಲ ಅಂಕಗಳಿಕೆ, ಹಣಗಳಿಕೆ ಮುಖ್ಯವಲ್ಲ. ನಮಗೇನು ಬೇಕು ಎಂಬುದನ್ನು ಅರಿತುಕೊಳ್ಳುತ್ತಾ ಇದ್ದುದರಲ್ಲಿ ತೃಪ್ತಿ ಕಂಡುಕೊಳ್ಳುತ್ತಾ ನೆಮ್ಮದಿಯ ಬಾಳ್ವೆ ನಡೆಸುವುದೇ ಪರಮ ಸತ್ಯ ಎಂಬುದನ್ನು ಮಕ್ಕಳಿಗೆ ಅರ್ಥ ಮಾಡಿಸಿ. ಮಕ್ಕಳ ಮಾನಸಿಕ, ನೈತಿಕ ಬೆಳವಣಿಗೆಯಲ್ಲಿ ಪೋಷಕರಾಗಿ ನಿಮ್ಮ ಪಾತ್ರ ಬಹಳ ಮಹತ್ವದ್ದು.