ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ (UMRA) ವಾರ್ಷಿಕ ಮಹಾಸಭೆ :ಅಧ್ಯಕ್ಷರಾಗಿ ವಿವೇಕ್ ಸುವರ್ಣ ,ಗೌರವಾಧ್ಯಕ್ಷರಾಗಿ ಸಂದೇಶ್ ಬಲ್ಲಾಳ್ ಆಯ್ಕೆ

ಉಡುಪಿ: ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ (UMRA) ಇದರ ವಾರ್ಷಿಕ ಮಹಾಸಭೆ ಹಾಗೂ ಹೊಸ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ದಿನಾಂಕ 20 ಆಗಸ್ಟ್ 2026 ರಂದು Ocean Pearl Hotel ನಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಆಗಮಿಸಿದ ಎಲ್ಲಾ ಜಿಲ್ಲಾ ಹಾಗೂ ವಲಯದ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಂತರ ಜಿಲ್ಲಾ ಕಾರ್ಯದರ್ಶಿ ಖಾದರ್ ಅವರು ಕಳೆದ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಬಳಿಕ ಜಿಲ್ಲಾ ಕೋಶಾಧಿಕಾರಿ ಇಮ್ರಾನ್ ಅವರು ಸಂಘದ ಲೆಕ್ಕಪತ್ರ ಹಾಗೂ ಆರ್ಥಿಕ ವರದಿಯನ್ನು ಮಂಡಿಸಿದರು.

ನಂತರ ಉಪಾಧ್ಯಕ್ಷರಾದ ರಂಜಿಷ್ ಶೆಟ್ಟಿ ಅವರು ಸಂಘದ ಮುಂದಿನ ಬೆಳವಣಿಗೆ ಹಾಗೂ ಸದಸ್ಯರ ಒಗ್ಗಟ್ಟಿನ ಕುರಿತು ಹಿತನುಡಿಗಳನ್ನು ನೀಡಿದರು.

ಅನಂತರ ಜಿಲ್ಲಾ ಅಧ್ಯಕ್ಷರು ಕಳೆದ ಒಂದು ವರ್ಷದಲ್ಲಿ ಸಂಘವು ಸಾಗಿಬಂದ ಹಾದಿ, ಕೈಗೊಂಡ ವಿವಿಧ ಕಾರ್ಯಚಟುವಟಿಕೆಗಳು, ತೆಗೆದುಕೊಂಡ ನಿರ್ಧಾರಗಳು ಹಾಗೂ ಸದಸ್ಯರ ಸಹಕಾರದೊಂದಿಗೆ ನಡೆಸಿದ ಹಲವು ಉತ್ತಮ ಕಾರ್ಯಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಆಯ್ಕೆ ಪ್ರಕ್ರಿಯೆಯನ್ನು ಸಂಸ್ಥಾಪಕ ಅಧ್ಯಕ್ಷರು ಹಾಗೂ ಚುನಾವಣಾ ಅಧ್ಯಕ್ಷರಾದ ವಿವೇಕ್ ಜಿ ಸುವರ್ಣ ಅವರು ನಡೆಸಿಕೊಟ್ಟರು.

ವಿವೇಕ್ ಜಿ ಸುವರ್ಣ ಅವರನ್ನು ಅವಿರೋಧವಾಗಿ 2026–27ನೇ ಸಾಲಿನ ಜಿಲ್ಲಾ ಅಧ್ಯಕ್ಷರಾಗಿ ವಿವೇಕ್ ಸುವರ್ಣ ,ಗೌರವಾಧ್ಯಕ್ಷರಾಗಿ ಸಂದೇಶ್ ಬಲ್ಲಾಳ್ ಇವರನ್ನು ಆಯ್ಕೆ ಮಾಡಲಾಯಿತು.

  • ಕಾರ್ಯದರ್ಶಿ: ಖಾದರ್ – ಅವಿರೋಧ
  • ಕೋಶಾಧಿಕಾರಿ: ಇಮ್ರಾನ್ – ಅವಿರೋಧ
  • ಉಪಾಧ್ಯಕ್ಷರು: ಸುದರ್ಶನ್ – ಚುನಾವಣೆಯ ಮೂಲಕ ಆಯ್ಕೆ
  • ಗೌರವ ಸಲಹೆಗಾರರು: ರಂಜಿತ್ ಶೆಟ್ಟಿ – ಅವಿರೋಧ
  • ಗೌರವ ಅಧ್ಯಕ್ಷರು: ಸಂದೇಶ್ ಬಲ್ಲಾಳ್ – ಚುನಾವಣೆಯ ಮೂಲಕ ಹೆಚ್ಚಿನ ಮತ ಪಡೆದು ಪುನರಾಯ್ಕೆ
  • ಸ್ಪೋರ್ಟ್ಸ್ ಕಾರ್ಯದರ್ಶಿ: ಮೆಹ್ಮೂದ್ – ಚುನಾವಣೆಯ ಮೂಲಕ ಪುನರಾಯ್ಕೆ
  • ಜಾಯಿಂಟ್ ಸ್ಪೋರ್ಟ್ಸ್ ಕಾರ್ಯದರ್ಶಿ: ಶಿವರಾಜ್
  • ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯದರ್ಶಿ: ವಿಜಯ್ – ಚುನಾವಣೆಯ ಮೂಲಕ ಆಯ್ಕೆ
  • ಜಾಯಿಂಟ್ ಸಾಂಸ್ಕೃತಿಕ ಕಾರ್ಯದರ್ಶಿ: ಶಿಷಧರ್
  • ಜಾಯಿಂಟ್ ಕಾರ್ಯದರ್ಶಿ: ಜೇಸನ್ – ಅವಿರೋಧ

ಚುನಾವಣೆ ಮೂಲಕ ಆಯ್ಕೆಯಾದರು.ನಂತರ 2026–27ನೇ ಸಾಲಿನ UMRA ಸಂಘದ ನಿಯಮಗಳು ಹಾಗೂ ಸದಸ್ಯತ್ವದ ಕುರಿತು ಸಭೆಯಲ್ಲಿ ಎಲ್ಲರಿಗೂ ವಿವರಿಸಲಾಯಿತು.

ಸಂಘದ ನಿಯಮಗಳನ್ನು ಪಾಲಿಸಿ, ಜಿಲ್ಲೆಯ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು.

ಅಂತಿಮವಾಗಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ಜಿಲ್ಲಾ ಹಾಗೂ ವಲಯದ ಪದಾಧಿಕಾರಿಗಳು, ಸದಸ್ಯರು ಮತ್ತು ಹಿತೈಷಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.