ಫೆಬ್ರವರಿ 21 ರಿಂದ ಮಾರ್ಚ್ 10 ರವರೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಯುಜಿಸಿ-ನೆಟ್ 2023 ರ ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್.ಟಿ.ಎ) ಪ್ರಕಾರ,ಯುಜಿಸಿ- ರಾಷ್ಟ್ರೀಯ ಅರ್ಹತಾ ಪರೀಕ್ಷೆಯು ಫೆಬ್ರವರಿ 21 ರಿಂದ ಮಾರ್ಚ್ 10, 2023 ರವರೆಗೆ ನಡೆಯಲಿದೆ. ಯುಜಿಸಿ-ನೆಟ್ 2023 ಪರೀಕ್ಷೆಯ ನೋಂದಣಿ ಪ್ರಕ್ರಿಯೆಯು ಇಂದು ಪ್ರಾರಂಭವಾಗಿದೆ. ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು 17 ಜನವರಿ 2023 ರ ಸಂಜೆ 5 ಗಂಟೆ ಮೊದಲು ಸಲ್ಲಿಸಬೇಕು.

ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ವಿದ್ಯಾರ್ಥಿಗಳ ಸೂಕ್ತತೆಯನ್ನು ನಿರ್ಧರಿಸಲು, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಫೆಬ್ರವರಿ 2023 ರಿಂದ ಮಾರ್ಚ್ 2023 ರವರೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ನಡೆಸುತ್ತದೆ. ಫೆಬ್ರವರಿ 23, 2023 ರಿಂದ ಮಾರ್ಚ್ 10, 2023 ರವರೆಗೆ ಪರೀಕ್ಷೆಯನ್ನು ನಡೆಸಲಾಗುವುದು. ಅಧಿಕೃತ ಸೂಚನೆಯ ಪ್ರಕಾರ, ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮೋಡ್‌ನಲ್ಲಿ ನಡೆಸಲಾಗುವುದು.

ಭಾರತೀಯ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ “ಅಸಿಸ್ಟೆಂಟ್ ಪ್ರೊಫೆಸರ್” ಮತ್ತು “ಜೂನಿಯರ್ ರಿಸರ್ಚ್ ಫೆಲೋಶಿಪ್” ಹುದ್ದೆಗಳಿಗಾಗಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಯುಜಿಸಿ ಅಧ್ಯಕ್ಷ ಎಂ ಜಗದೇಶ್ ಕುಮಾರ್ ತಿಳಿಸಿದ್ದಾರೆ.

ಒಟ್ಟು 83 ವಿಷಯಗಳಿಗೆ ಪರೀಕ್ಷೆಗಳು ಸಿಬಿಟಿ ಮೋಡ್ ನಲ್ಲಿ ನಡೆಯಲಿವೆ.