ಉಡುಪಿ: ಆತ್ರಾಡಿಯ ಸವ್ಯ ಸಾಚಿ ಶಿಶುಮಂದಿರದಲ್ಲಿ ಯುಗಾದಿ ಹಬ್ಬ, ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆ

ಉಡುಪಿ: ಸವ್ಯ ಸಾಚಿ ಶಿಶು ಮಂದಿರದಲ್ಲಿ ಯುಗಾದಿ ಹಬ್ಬವನ್ನು ಮಂದಿರದ ಅಧ್ಯಕ್ಷರಾದ ಕೃಷ್ಣಮೂರ್ತಿ ಪ್ರಭು ಇವರ ಅದ್ಯಕ್ಷತೆಯಲ್ಲಿ ವೈಶಿಷ್ಟ ಪೂರ್ಣವಾಗಿ ಆಚರಿಸಲಾಯಿತು. ಶ್ರೀಮತಿ ವಸಂತಿ ಶೆಟ್ಟಿ ಮತ್ತು ಸಾಧುಶೆಟ್ಟಿಯವರು ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಪತ್ ರವರು ರವರು ಎಲ್ಲರನ್ನೂ ಸ್ವಾಗತಿಸಿದರು. ಭಾರತಮಾತೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ನಂತರ ಸವ್ಯ ಸಾಚಿ ಶಿಶುಮಂದಿರದ ಪುಟಾಣಿಯರು ಪ್ರಾತಃ ಸ್ಮರಣೆ ಯನ್ನು ಅರ್ಥ ಸಹಿತ ಪಠಿಸಿದರು. ಸಂಸ್ಕೃತ ವಚನ ಗಳನ್ನು ಓದಿದರು. ಉಪಸ್ಥಿತರಿದ್ದ ಮಾತೇಯಂದಿರು ಪುಟಾಣಿ ಮಕ್ಕಳಿಗೆ ಮಂಗಳಾರತಿ ಮಾಡಿ ಸಾಮೂಹಿಕ ಜನ್ಮ ದಿನಾಚರಣೆಯನ್ನು ಆಚರಿಸಿದರು. ನಂತರ ಎಲ್ಲರಿಗೂ ಬೇವು ಬೆಲ್ಲವನ್ನು ಹಂಚಲಾಯಿತು.

ಶ್ರೀಮತಿ ಉಮಾ ಮಹೇಶ್ವರಿ ಭಟ್ ಮತ್ತು ಸತ್ಯಾನಂದ ನಾಯಕ್ ಮತ್ತು ಕೃಷ್ಣ ಮೂರ್ತಿ ಪ್ರಭು ರವರು ಯುಗಾದಿ ಹಬ್ಬದ ಮಹತ್ವವನ್ನು ತಿಳಿಸಿದರು.

ಮಾತಾಜಿ ಶ್ರೀಮತಿ ಅನಿತಾರವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಶ್ರೀಮತಿ ವಿದ್ಯಾರವರು ಸರ್ವರಿಗೂ ಧನ್ಯವಾದಗಳನ್ನಿತ್ತರು. ನಂತರ ಸಿಹಿ ತಿಂಡಿ ಮತ್ತು ಹಣ್ಣು ಹಂಪಲುಗಳನ್ನು ಪ್ರಸಾದ ರೂಪವಾಗಿ ವಿತರಣೆ ಮಾಡಲಾಯಿತು.