ಉದ್ಯಮ, ಸ್ವ-ಉದ್ಯೋಗ ಪ್ರಾರಂಭಿಸಲು ತರಬೇತಿ

ಉಡುಪಿ: ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಉದ್ಯಮಶೀಲತಾ ಮಾರ್ಗದರ್ಶನ ಕೇಂದ (ಸಿಡಾಕ್)ದ ಮೂಲಕ ಉದ್ಯಮ ಮತ್ತು ಸ್ವ-ಉದ್ಯೋಗ ಪ್ರಾರಂಭಿಸಲು ಮಾಹಿತಿ ಹಾಗೂ ತರಬೇತಿ ನೀಡಲಾಗುತ್ತದೆ.

ಕರ್ನಾಟಕ ಸರಕಾರದಿಂದ ವ್ಯವಹಾರ ಯೋಜನೆ, ಯೋಜನೆಯ ವರದಿ, ಕಂಪನಿಯ ನೋಂದಣಿ, ಮಾರುಕಟ್ಟೆ ಸಮೀಕ್ಷೆ, ಅನುದಾನಿತ ಸರ್ಕಾರಿ ಸಾಲಗಳು ಹಾಗೂ ಸರಕಾರದ ಯೋಜನೆಗಳ ಸಂಪೂರ್ಣ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಳ್ಳಿ ಕೈಗಾರಿಕಾ ವಸಾಹತು, ಮಣಿಪಾಲ, ಉಡುಪಿ ದೂ.ಸಂಖ್ಯೆ: 9844700937 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.