ಉಡುಪಿ: ಉಡುಪಿ ಮೀಡಿಯಾ ನೆಟ್ ವರ್ಕ್ ಉಡುಪಿXPRESS.COM ನ “ಪರ್ಯಾಯ ಪುಣ್ಯೋತ್ಸವ” ಪರ್ಯಾಯ ವಿಶೇಷ ಸಂಚಿಕೆಯನ್ನು ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಅವರು ಸೋಮವಾರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಡುಪಿXPRESS ನ ಪ್ರಧಾನ ಸಂಪಾದಕರಾದ ಪ್ರಸಾದ್ ಶೆಣೈ, ಸಹ ಸಂಪಾದಕರಾದ ಜೀವನ್ ಶೆಟ್ಟಿ, ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾದ ಸ್ವರೂಪ್ ಶ್ರಿಯಾನ್, ಶುಭನ್ ಆಚಾರ್ಯ ಉಪಸ್ಥಿತರಿದ್ದರು.