ಮಣಿಪಾಲ: ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ವತಿಯಿಂದ ವಾರ್ಷಿಕ ವಿಚಾರ ಸಂಕಿರಣ ಮ್ಯಾನೇಜ್ಮೆಂಟ್ ಕಾಂಕ್ಲೇವ್ 2020 ಫೆ. 29 ರಂದು ನಡೆಯಿತು. ಇಲ್ಲಿ ವ್ಯಾಸಂಗ ಮಾಡಿದ ನಾಲ್ವರು ಹಳೆ ವಿದ್ಯಾರ್ಥಿಗಳಾದ ನೀವಿಯಸ್ ಸೊಲ್ಯೂಷನ್ಸ್ ಇದರ ಉಪಾಧ್ಯಕ್ಷರಾದ ಶಾಂಭವಿ ಭಂಡಾರ್ಕರ್, ಎಮ್ಫಸಿಸ್ ಇದರ ಮಾನವ ಸಂಪನ್ಮೂಲ ನಿರ್ವಹಣಾ ವಿಭಾಗದ ಅಧಿಕಾರಿ ಶಿಪ್ರ ರೈ, ಫೂಶಿಯಾ ಸ್ಥಾಪಕರಾದ ಡಾ. ಮೋಹಿತ್ ಭಾಟಿಯಾ ಮತ್ತು ವಾಟಿಕಾ ಇಂಟರ್ ನ್ಯಾಷನಲ್ ಟ್ರಾವೆಲ್ಸ್ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಟಿಕಾ ಪೈ ಸಂಪನ್ಮೂಲ ವ್ಯಕ್ತಿಗಳಾಗಿ ಮ್ಯಾನೇಜ್ಮೆಂಟ್ ವಿಷಯದ ವಿವಿಧ ಆಯಾಮಗಳ ಕುರಿತು ಮಾತನಾಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ಷೇತ್ರದಲ್ಲಿ ಒಳಗೊಳ್ಳುವಿಕೆಯ ಬಗ್ಗೆಯೂ ಚರ್ಚೆ ನಡೆಯಿತು. ಡಾ. ಯೋಗಿಶ್ ಪೈ, ಪ್ರೊ. ಸೂರಜ್ ಫ್ರಾಂಸಿಸ್ ನೊರೋಹ್ನಾ ಮುಂತಾದವರು ಉಪಸ್ಥಿತರಿದ್ದರು.