ಕುಂದಾಪುರ: ಕೊರೋನಾ ಪಿಡುಗಿನ ಹಿನ್ನೆಲೆಯಲ್ಲಿ ಲಾಕ್ಡೌನ್ಗೆ ಒಳಗಾಗಿ ಜನ ಅತಂತ್ರರಾಗಿ ಕಂಗಾಲಾಗಿರುವ ಸಂದರ್ಭ ಆಯಾಯ ಗ್ರಾಮಗಳಲ್ಲಿ ಉದಾರ ದಾನಿಗಳಿಂದ ನಿತ್ಯ ಬಳಕೆಗೆ ಬೇಕಿರುವ ಆಹಾರ ಸಾಮಾಗ್ರಿಗಳ ಕಿಟ್ ಹಂಚಿ ಮಾನವಿಯ ಮೌಲ್ಯವನ್ನು ಎತ್ತಿಹಿಡಿದು ಕಡುಬಡವರುಗಳ ಹಸಿವು ನೀಗಿಸುವ ಕೆಲಸವಾಗುತ್ತಿದೆ.
ಈ ನಿಟ್ಟಿನಲ್ಲಿ ತಲ್ಲೂರು ಗ್ರಾಮ ಪಂಚಾಯತ್ ಸದಸ್ಯ, ನೀರುನೈರ್ಮಲ್ಯ ಸಮಿತಿಯ ಅಧ್ಯಕ್ಷ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆಯ ರಾಜ್ಯಾಧ್ಯಕ್ಷ ಉದಯ್ ಕುಮಾರ್ ತಲ್ಲೂರು ಅವರ ಮುಖಾಂತರ ದಾನಿಗಳಾದ ಶಿರೂರಿನ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಒಕ್ಕೂಟದ ಯಾಸಿನ್ ಶಿರೂರು ಇವರಿಂದ ತಮ್ಮ ಗ್ರಾಮ ಪಂಚಾಯತ್ ವಾರ್ಡಗೆ ಒಂದನೆ ಹಂತದಲ್ಲಿ ೭೬ ಮನೆಗಳಿಗೆ ಅಕ್ಕಿ ದಿನಸಿ ಸಾಮಾಗ್ರಿಗಳಿರುವ ಕಿಟ್ ಹಂಚಿದರು. ಅಲ್ಲದೇ ಕೊರೋನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಆಶಾಕಾರ್ಯಕರ್ತೆಯರಿಗೂ ಕಿಟ್ ಹಂಚಿ ನಿಮ್ಮೂಂದಿಗೆ ನಮ್ಮ ಬಲ ಇದೆ ಎಂದು ಹುರಿದುಂಬಿಸಿದರು.ಇನ್ನುಳಿದ ಮನೆಗಳಿಗೆ ಎರಡನೆ ಹಂತದಲ್ಲಿ ದಾನಿಗಳ ನೆರವಿನಲ್ಲಿ ನಿತ್ಯ ಬಳಕೆ ವಸ್ತುಗಳ ಕಿಟ್ ಹಂಚಲು ತಯಾರಿ ನಡೆಸುತ್ತಿರುವುದಾಗಿ ಉದಯ್ ಕುಮಾರ್ ತಲ್ಲೂರು ತಿಳಿಸಿದ್ದಾರೆ.