ಜೇಸಿಐ ಉಡುಪಿ ಇಂದ್ರಾಳಿ ಘಟಕದ ವತಿಯಿಂದ ವಿದ್ಯಾರ್ಥಿ ವೇತನ ನಿಧಿ ಸಂಗ್ರಹಣಾ ಅಭಿಯಾನ

ಉಡುಪಿ:  ಜೇಸಿಐ ಉಡುಪಿ ಇಂದ್ರಾಳಿ ಘಟಕದ ವತಿಯಿಂದ ಉಡುಪಿ ಅದಮಾರು ಪರ್ಯಾಯ ಮಹೊತ್ಸವದ ಅಂಗವಾಗಿ ಮೀಸಲಾತಿ ರಹಿತ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಿಧಿ ಸಂಗ್ರಹಣಾ ಅಭಿಯಾನ”. ಕಾರ್ಯಕ್ರಮ ನಡೆಯಿತು.

ರೋಯಾನ್ ಉದಯ ಕ್ರಾಸ್ತಾ ಕಾರ್ಯಕ್ರಮ ಉದ್ಘಾಟಿಸಿದರು.
2020ರ ವರ್ಷದ ಅಧ್ಯಕ್ಷರಾದ ಎಂ. ಏನ್. ನಾಯಕ್ , ಸ್ಥಾಪಕರಾದ  ಮನೋಜ್ ಕಡಬ ಅವರ ನೇತೃತ್ವದಲ್ಲಿ ವಹಿಸಿದ್ದರು.ಜೆಸಿ ಐ ಸದಸ್ಯರು ಗಳಾದ ಶೆರ್ಲಿ ಮನೋಜ್ ,ಅಶೋಕ್ ಪೂಜಾರಿ , ನಾಗರಾಜ್ ಉಪಾದ್ಯಾಯ, ಉದಯ ಕೆ ಶೆಟ್ಟಿ ,ಸುನಿಲ್ ದೇವಾಡಿಗ ,ವೀಣಾ ನಾಗೇಶ್ ,ಪಂಚಮಿ ,ಶಿಲ್ಪಾ ಮೂವತ್ತಕ್ಕೂ ಹೆಚ್ಚು ಸದಸ್ಯರು ಅಭಿಯಾನದಲ್ಲಿ ಭಾಗವಹಿಸಿದ್ದರು

ದೇಣಿಗೆ ನೀಡಲು ಬಯಸಿದಲ್ಲಿ ಅಧ್ಯಕ್ಷರು ಜೇಸಿಐ ಉಡುಪಿ ಇಂದ್ರಾಳಿ ಇವರಿಗೆ ಸಂಪರ್ಕಿಸಬಹುದು ಮೊಬೈಲ್ ಸಂಖ್ಯೆ :9743491881(ಗೂಗಲ್ ಪೆ ಮಾಡಬಹುದು ) ಎಂದು ಜೆಸಿಐ ಇಂದ್ರಾಳಿಯ ಕಾರ್ಯದರ್ಶಿ ಜೆಸಿ ರಾಧಾಕೃಷ್ಣ ಮಣಿಪಾಲ್ ತಿಳಿಸಿದ್ದಾರೆ.