ವಸತಿ ಯೋಜನೆಯಡಿಯಲ್ಲಿ ಮನೆ ನಿರ್ಮಿಸಲು ಸಹಾಯಧನ- ಅರ್ಜಿ ಆಹ್ವಾನ

ಉಡುಪಿ :ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಹೊಂದಿರುವ ವಸತಿ ರಹಿತ ಕುಟುಂಬಗಳಿಗೆ ಸರ್ಕಾರದ ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿಯಲ್ಲಿ ಮನೆ ನಿರ್ಮಿಸಲು ಸಹಾಯಧನಕ್ಕಾಗಿ ಅರ್ಹ ಕುಟುಂಬಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

     ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ 2018-19 ನೇ ಸಾಲಿಗೆ 19 ಮತ್ತು 2019-20 ನೇ ಸಾಲಿಗೆ 9 ಮನೆಗಳ ಗುರಿ ನಿಗಧಿಪಡಿಸಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿಯಲ್ಲಿ 2019-20 ನೇ ಸಾಲಿಗೆ 10 ಮನೆಗಳ ಗುರಿ ನಿಗಧಿಪಡಿಸಲಾಗಿದೆ.

    ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು/ ಸಂಬಂಧಿಸಿದ ನಮೂನೆಯಲ್ಲಿ ಅರ್ಜಿ, ಜಾತಿ/ ಆದಾಯ ಪ್ರಮಾಣ ಪತ್ರ (ಆದಾಯ ಮಿತಿ 87600 ರೂ.), ಪಡಿತರ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಪ್ರತಿ ಹಾಗೂ ಸಂಬಂಧಪಟ್ಟ ಜಮೀನಿನ ಭೂ.ಪ.ಪ್ರತಿ, ಖಾತೆ ಬದಲಾವಣೆ ಪ್ರತಿ, ಪಹಣಿ ಪತ್ರ, ಪಾಸ್ ಪೋರ್ಟ್ ಅಳತೆಯ 1 ಭಾವಚಿತ್ರ, ಪಟ್ಟಣ ಪಂಚಾಯತ್‍ನ ಕಟ್ಟಡ ಪರವಾನಿಗೆ ಪ್ರತಿ- ಈ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು. ರಚಿಸುವ ಮನೆಯ ಅಳತೆಯು ಕನಿಷ್ಟ 285 ಚ.ಅಡಿ, ಗರಿಷ್ಟ 700 ಚ.ಅಡಿ ಇರತಕ್ಕದ್ದು. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ.

    ಹೆಚ್ಚಿನ ಮಾಹಿತಿಗಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್‍ನ ಕಚೇರಿಯನ್ನು ಸಂಪರ್ಕಿಸುವಂತೆ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.