ನಾಗರಿಕ ಸೇವೆಗಳ ತರಬೇತಿಗೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಉಡುಪಿ: ಪಿಯುಸಿ/ಐಸಿಎಸ್‌ಸಿ/ಸಿಬಿಎಸ್‌ಸಿ ಮಂಡಳಿಗಳು ಶೈಕ್ಷಣಿಕ ವರ್ಷ 2019-20ರ ಅವಧಿಯಲ್ಲಿ ನಡೆಸಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ವಾಣಿಜ್ಯ ಮತ್ತು ಕಲಾ ವಿಭಾಗದ (ವಿಜ್ಞಾನದ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ) ಮತೀಯ ಅಲ್ಪಸಂಖ್ಯಾತರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಪಾರ್ಸಿ, ಸಿಖ್) ಸಮುದಾಯದ ವಿದ್ಯಾರ್ಥಿಗಳಿಗೆ “ನಾಗರಿಕ ಸೇವೆಗಳ ತರಬೇತಿ” ಸಂಯೋಜಿತ ಪದವಿ ಕೋರ್ಸ್ಗಳಿಗೆ ಆನ್‌ಲೈನ್ ಮಾಲಕ ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪ್ರತಿಭೆ ಆಧಾರದ ಮೇಲೆ ಮೊದಲ 50 ವಿದ್ಯಾರ್ಥಿಗಳನ್ನು ಮಾತ್ರ ಕಿರುಪಟ್ಟಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್  https://gokdom.kar.nic.in ನಲ್ಲಿ ನೋಡಬಹುದು.

ಷರತ್ತುಗಳು : ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು, ಕುಟುಂಬದ ವಾರ್ಷಿಕ ಆದಾಯ ವರ್ಗ-1 ಕ್ಕೆ 4.5 ಲಕ್ಷ ಮತ್ತು ಇತರರಿಗೆ 3.5 ಲಕ್ಷ ಮೀರಿರಬಾರದು, ಉಚಿತ ಊಟ, ವಸತಿ ಮತ್ತು ಇತರೆ ಮೂಲಭೂತ ಸೌಲಭ್ಯಗಳನ್ನು ಒಳಗೊಂಡAತೆ ಸಂಪೂರ್ಣ ಸನಿವಾಸಿ ಕೋರ್ಸ್ ಆಗಿರುವುದು. ದ್ವಿತೀಯ ಪಿಯುಸಿ ಕಲಾ ಹಾಗೂ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು (ವಿಜ್ಞಾನದ ವಿಭಾಗದ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ).ಕೇವಲ ಬಿಎ ಹಾಗೂ ಬಿಕಾಂ ಪದವಿ ತರಬೇತಿ ಲಭ್ಯವಿರುತ್ತದೆ.

ಕೌನ್ಸಿಲಿಂಗ್ ಸಂದರ್ಭದಲ್ಲಿ ಸಲ್ಲಿಸಬೇಕಾದ ದಾಖಲೆಗಳು:

ಮೂಲ ಮತ್ತು ದೃಢೀಕೃತ ಎಸ್.ಎಸ್.ಎಲ್.ಸಿ, ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ಅಂಕಪಟ್ಟಿ. ತಹಶೀಲ್ದಾರರಿಂದ ಪಡೆದ ಮೂಲ ಮತ್ತು ದೃಢೀಕೃತ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ದ್ವಿತೀಯ ಪಿಯುಸಿ ಹಾಗೂ ಎಸ್.ಎಸ್.ಎಲ್.ಸಿ ಯ ವರ್ಗಾವಣೆ ಪ್ರಮಾಣ ಪತ್ರ

ಬಿ.ಪಿ.ಎಲ್ /ರೇಷನ್ ಕಾರ್ಡ್, ಇತ್ತೀಚಿನ 2 ಭಾವಚಿತ್ರ(ಸ್ವಯಂ ದೃಢೀಕೃತ), ಪೂರ್ಣ ವಿಳಾಸವನ್ನು (ಗ್ರಾಮ/ತಾಲೂಕು/ಜಿಲ್ಲಾ) ಪಿನ್‌ಕೋಡ್ ಜೊತೆಗೆ ಸಲ್ಲಿಸುವುದು., ಮೂಲ ಮತ್ತು ದೃಢೀಕೃತ ಆಧಾರ್‌ಕಾರ್ಡ್. ಅರ್ಜಿ ಸಲ್ಲಿಸಲು ಆಗಸ್ಟ್ 31  ಕೊನೆಯ ದಿನಾಂಕ ಆಗಿರುತ್ತದೆ. ಎಂದು ಜಿಲ್ಲಾ ಅಧಿಕಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ , ಉಡುಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.