ಉಡುಪಿ: ಮಾ. 1ಕ್ಕೆ ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ವರ್ಧಂತಿ ಮಹೋತ್ಸವ

ಉಡುಪಿ: ದೊಡ್ಡಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರ್ಣಿಕ ಕ್ಷೇತ್ರದ ಷಟ ಶಿರ ಸುಬ್ರಹ್ಮಣ್ಯ ಸ್ವಾಮಿ ಹಾಗೂ ನಾಗ ಸನ್ನಿಧಾನದ ವಾರ್ಷಿಕ ಪ್ರತಿಷ್ಠಾ ಮಹೋತ್ಸವವು ಮಾರ್ಚ್ 1ರಂದು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ನೆರವೇರಲಿದೆ.

ಆ ಪ್ರಯುಕ್ತ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ನಾಗರಾಜ ನಾಗ ರಾಣಿಯರ ಸನ್ನಿಧಾನದಲ್ಲಿ ಪಂಚವಿಂಶತಿ ಕಳಶಾರಾಧನೆ, ಕಲಶಾಭಿಷೇಕ, ಪ್ರಧಾನ ಯಾಗ ಜರಗಲಿದೆ. ಬ್ರಹ್ಮ ದೇವರ ಸನ್ನಿಧಾನದಲ್ಲಿ ನವಕ ಕಲಷ ಪ್ರಧಾನ ಹೋಮ ಕಲಶಾಭಿಷೇಕ, ಸುಬ್ರಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ಪವಮಾನ ಕಲಶಾಭಿಷೇಕ, ಪರಿವಾರ ಪೂಜೆ, ಆಶ್ಲೇಷ ಬಲಿ ಸೇವೆ ನೆರವೇರಲಿದೆ.

ಬ್ರಹ್ಮಚಾರಿ ಆರಾಧನೆ, ಬ್ರಾಹ್ಮಣ ಸುವಾಸಿನಿ ಆರಾಧನೆ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.