ಉಡುಪಿ: ಈ ಸಲದ ಉಡುಪಿ ಉತ್ಸವ ಕೆಲವೊಂದು ಹೊಸ ವೈಶಿಷ್ಟ್ಯದೊಂದಿಗೆ ಉಡುಪಿಯಲ್ಲಿ ಹೊಸತೊಂದು ಲೋಕವನ್ನೇ ತೆರೆದಿಟ್ಟಿದೆ. ಪ್ರತೀ ವರ್ಷ ಚಳಿಗಾಲ ಆರಂಭವಾಗುತ್ತಲೇ ಉಡುಪಿ ಉತ್ಸವದ ಸದ್ದೂ ಕೇಳತೊಡಗುತ್ತದೆ. ಕಳೆದ ಹತ್ತು ವರ್ಷಗಳಿಂದ ಕಲ್ಸಂಕದ ರಾಯಲ್ ಗಾರ್ಡನ್ ಮೈದಾನದಲ್ಲಿ ಉಡುಪಿ ಜನರಿಗೆ ಭರ್ಜರಿ ತಿಂಗಳ ಕಾಲ ಮನೋರಂಜನೆ ನೀಡುತ್ತಿರುವ ಉಡುಪಿ ಉತ್ಸವಕ್ಕೆ ಈ ಸಲವೂ ನೀವು ಫ್ಯಾಮಿಲಿ ಜೊತೆ ಉಡುಪಿ ಉತ್ಸವ ಒಂದು ರೌಂಡ್ ಹೊಡೆದುಕೊಂಡು ಬರಲೇಬೇಕು.
ಏನಿದೆ ಸ್ಪೆಷಲ್:
ಈ ಸಲದ ವಿಶ್ವದ ಅತೀ ಎತ್ತರದ ಬುರ್ಜ್ ಖಾಲಿಫಾ ಟವರ್ ಇಲ್ಲಿನ ವಿಶೇಷ, ಈ ಬಾರಿ ಅನೇಕ ಹೊಸ ಹೊಸ ಬಗೆಯ ವೈವಿಧ್ಯಮಯ ಆಕರ್ಷಕ ಕೈಬರಹದ ಪೈಂಟಿಂಗ್ ನ ಸೆಲ್ಫಿ ಗ್ಯಾಲರಿ, ಎನಿಮಲ್ ಕಿಂಗ್ಡಮ್ ಇವೆ. ಮಕ್ಕಳು ಯುವಕರು ಮತ್ತು ಗೃಹಿಣಿಯರನ್ನು ವಿಶೇಷವಾಗಿ ಗಮನದಲ್ಲಿರಿಸಿಕೊಂಡು ಈ ಉತ್ಸವವನ್ನು ಸಿದ್ಧಗೊಳಿಸಲಾಗಿದ್ದು ನೂರಕ್ಕೂ ಅಧಿಕ ಮಳಿಗೆಗಳು, ಆಟೋಮೊಬೈಲ್ಸ್, ಗೃಹಬಳಕೆ ಸಾಮಗ್ರಿಗಳು, ಎಲೆಕ್ಟ್ರಾನಿಕ್ಸ್ ಪರಿಕರಗಳು, ಹ್ಯಾಂಡ್ ಲೂಮ್ಸ್ ಬಟ್ಟೆಗಳು, ಚಪ್ಪಲಿ, ಬ್ಯಾಗ್, ಸಿದ್ಧ ಉಡುಪುಗಳು, ಅಲಂಕಾರಿಕ ಸಾಮಗ್ರಿಗಳು, ಕ್ಯಾಲೆಂಡರ್ ಫೋಟೋಗಳು, ಒಂದು ಗ್ರಾಂ ಚಿನ್ನದ ಆಭರಣಗಳು ಇಲ್ಲಿವೆ. ಜೋಳದ ವಿವಿಧ ಖಾದ್ಯಗಳು, ದೋಸಾ ಕ್ಯಾಂಪ್ ಗ್ರಾಹಕರನ್ನು ಆಕರ್ಷಿಸುತ್ತಿವೆ. ಇಟಾಲಿಯನ್ ಟೊರ ಟೊರ ಬ್ರೇಕ್ ಡ್ಯಾನ್ಸ್, ಡ್ರಾಗನ್ ಟ್ರೇನ್, 3ಡಿ ಶೋ, ಟೈಟಾನಿಕ್ ಮೊದಲಾದವುಗಳು ಮನರಂಜನೆ ನೀಡಲಿದೆ. ಪ್ರತಿದಿನ ಸಂಜೆ 4 ಗಂಟೆಯಿಂದ 9 ಗಂಟೆ ತನಕ ಉತ್ಸವ ತೆರೆದಿರುತ್ತದೆ. ರೂ.೫೦ ರೂ ಪ್ರವೇಶ ದರ ನೀಡಿದರೆ, ಒಂದಷ್ಟು ಹೊತ್ತು ಫ್ಯಾಮಿಲಿ ಜೊತೆ ಮಜಾ ಉಡಾಯಿಸಲು ಉಡುಪಿ ಉತ್ಸವ ಬೆಸ್ಟ್.
ಉತ್ಸವದ ಬಗ್ಗೆ ಯಾರು ಏನಂತಾರೆ?
ಈ ಸಲದ ಉಡುಪಿ ಉತ್ಸವ ವಿಶೇಷವಾಗಿದೆ.ದುಬೈನ ಟವರ್ ರಚನೆ ಈ ಸಲದ ಉತ್ಸವದ ಆಕರ್ಷಣೆ, ಉಳಿದಂತೆ ಗಮನ ಸೆಳೆಯುವ ಸೆಲ್ಫಿ ಗ್ಯಾಲರಿಗಳು, ಮಳಿಗೆಗಳು, ಅನಿಮಲ್ ಗ್ಯಾಲರಿಗಳು, ಫುಡ್ ಸ್ಟಾಲ್ ಗಳು ಇಲ್ಲಿವೆ. ಫ್ಯಾಮಿಲಿ ಜೊತೆ ಕಾಳ ಕಳೆಯಲು ಉಡುಪಿ ಉತ್ಸವ ಸೂಕ್ತ ಸ್ಥಳ