ಪ್ರಾರ್ಥನಾ ಮಂದಿರಗಳ ಪಾವಿತ್ರ್ಯಕ್ಕಿಂತ ಮನುಷ್ಯನ ಘನತೆ ಮುಖ್ಯ:ಅಕ್ಬರ್‌ ಅಲಿ

ಉಡುಪಿ: ಪ್ರಾರ್ಥನಾ ಮಂದಿರಗಳ ಪಾವಿತ್ರ್ಯಕ್ಕಿಂತ ಮನುಷ್ಯನ ಘನತೆ ಮುಖ್ಯವಾಗಿರುತ್ತದೆ.
ಪ್ರಾರ್ಥನಾ ಮಂದಿರಗಳನ್ನು ಮನುಷ್ಯರು ಸೃಷ್ಠಿಸಿದರೆ, ಮನುಷ್ಯರನ್ನು ದೇವರು
ಸೃಷ್ಠಿಸಿದ್ದಾರೆ. ಆದ್ದರಿಂದ ಮಂದಿರಗಳಿಗಿಂತ ಮನುಷ್ಯನ ಪ್ರಾವಿತ್ಯತೆ ತುಂಬಾ
ಪ್ರಾಮುಖ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸದ್ಭಾವನಾ ಮಂಚ್‌ನ ಪ್ರಧಾನ ಕಾರ್ಯದರ್ಶಿ
ಅಕ್ಬರ್‌ ಅಲಿ ಹೇಳಿದರು.

ಅವರು ಸ್ಟೂಡೆಂಟ್ಸ ಇಸ್ಲಾಮಿಕ್‌ ಆರ್ಗನೈಸೇಶನ್‌ ಆ-ಫ್‌ ಇಂಡಿಯಾ ಉಡುಪಿ ಜಿಲ್ಲೆಯ ವತಿಯಿಂದ ಉಡುಪಿಯ ಮುಸ್ಲಿಮ್‌ ವೆಲ್ಫೆರ್‌ ಅಸೋಸಿಯೇಶನ್‌ ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾದ ಸೌಹಾರ್ದ ಇ-ಫ್ತಾರ್‌ ಕೂಟದಲ್ಲಿ ಮಾತನಾಡಿದರು.
ದೇವರು ಹಾಗೂ ಧರ್ಮ ಒಂದೇ ಎಂಬುದನ್ನು ಕುರಾನ್‌ ಪ್ರತಿಪಾದಿಸುತ್ತದೆ. ಆದರೆ ಮನುಷ್ಯರು ಧರ್ಮಗಳು ಬೇರೆ ಬೇರೆ ಎಂಬುದಾಗಿ ತಿಳಿದ ಪರಿಣಾಮ ಇಂದು ಸಮಾಜದಲ್ಲಿ ಕಂದಕ ಸೃಷ್ಠಿಯಾಗಿವೆ ಎಂದು ಹೇಳಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್‌
ಸರಳೇಬೆಟ್ಟು, ಎಸ್‌ಐಓ ಜಿಲ್ಲಾಧ್ಯಕ್ಷ ಅ-ಲ್ಫಾನ್‌ ಹೂಡೆ ಉಪಸ್ಥಿತರಿದ್ದರು. ಜಿಲ್ಲಾ
ಕಾರ್ಯದರ್ಶಿ ಶಾರೂಕ್‌ ತೀರ್ಥಹಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.