ಉಡುಪಿ: ಬಾವಿಗೆ ಹಾರಿ ಯುವಕ ಆತ್ಮಹತ್ಯೆ

ಉಡುಪಿ: ಬಾವಿಗೆ ಹಾರಿ‌ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ತಾಲೂಕಿನ ಉದ್ಯಾವರ ಬಲಾಯಿಪಾದೆ ಎಂಬಲ್ಲಿ ಇಂದು ನಡೆದಿದೆ.

ಮೃತರನ್ನು 30 ವರ್ಷದ ಸಚಿನ್ ಎಂದು ಗುರುತಿಸಲಾಗಿದೆ‌.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ‌. ಮಾಹಿತಿ‌ ತಿಳಿದು ಸ್ಥಳಕ್ಕೆ ಬಂದ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು, ಬಾವಿಗಿಳಿದು ಮೃತದೇಹ ಮೇಲೆತ್ತಿದರು.

ಇವರಿಗೆ ಸ್ಥಳೀಯರು ಸಹಕಾರ ನೀಡಿದರು. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.