ಉಡುಪಿ: ಬಾವಿಗೆ ಹಾರಿ ಯುವಕ ಆತ್ಮಹತ್ಯೆ

ಉಡುಪಿ: ಸರಿಯಾದ ಉದ್ಯೋಗ ಸಿಗದೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಡಯಾನ ಇಂದಿರಾನಗರ ಎಂಬಲ್ಲಿ ನಡೆದಿದೆ.

ಮೃತನನ್ನು ಇಂದಿರಾನಗರ ನಿವಾಸಿ ಧನಂಜಯ ಎಸ್. (36) ಎಂದು ಗುರುತಿಸಲಾಗಿದೆ. ಈತ ಅವಿವಾಹಿತನಾಗಿದ್ದು, ಸರಿಯಾದ ಕೆಲಸವೂ ಇರಲಿಲ್ಲ. ಅಲ್ಲದೆ, ಕಳೆದ ಐದು ವರ್ಷಗಳಿಂದ ಮಾನಸಿಕ  ಖಿನ್ನತೆಗೆ ಒಳಗಾಗಿದ್ದು, ಇದೇ ಕಾರಣದಿಂದ ಮನನೊಂದು ಜೂನ್ 23ರಂದು ಮನೆಯ ಬಳಿಯ ಸರ್ಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.