ಆಸ್ಟ್ರೇಲಿಯಾದ ರಾಜ್ಯ ಆಡಳಿತ ಮಂಡಳಿಗೆ ಉಡುಪಿ ಮೂಲದ ಯುವತಿ ಆಯ್ಕೆ

ಉಡುಪಿ: ಆಸ್ಟ್ರೇಲಿಯಾದ ಪ್ರಧಾನಿ ಸ್ಕೋಟ್ ಮೋರಿಸನ್ ಅವರ ನೇತೃತ್ವದ ಲಿಬರಲ್ ಪಾರ್ಟಿಯ ವಿಕ್ಟೋರಿಯ ರಾಜ್ಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಪೆರ್ಡೂರು ಮೂಲದ ಶಿಲ್ಪಾ ಹೆಗ್ಡೆ ಆಯ್ಕೆಯಾಗಿದ್ದಾರೆ.

ಶಿಲ್ಪಾ ಮೂಲತಃ ಉಡುಪಿ ಜಿಲ್ಲೆಯ ಪೆರ್ಡೂರು ನಿವಾಸಿ. ಪೆರ್ಡೂರಿನ ಮೋಹನ್ ದಾಸ್ ಹೆಗ್ಡೆ ಮತ್ತು ಶಶಿಕಲಾ  ಹೆಗ್ಡೆ ದಂಪತಿಯ ಪುತ್ರಿಯಾಗಿದ್ದಾರೆ. ಇವರು ನಿಟ್ಟೆಯಲ್ಲಿ ಇಂಜಿನಿಯರಿಂಗ್ ಮುಗಿಸಿ 2001ರಿಂದ ಆಸ್ಟ್ರೇಲಿಯಾದಲ್ಲಿ ಸಾಫ್ಟ್ ವೇರ್ ಕನ್ಸಲ್ಟೆನ್ಸಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.