ಉಡುಪಿ: ಎ.19ರಂದು “ಯಕ್ಷಧ್ರುವ ಪಟ್ಲಾಶ್ರಯ” ಯೋಜನೆಗೆ ಶೃಂಗೇರಿ ಶ್ರೀಗಳಿಂದ ಭೂಮಿಪೂಜೆ

ಉಡುಪಿ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ “ಯಕ್ಷಧ್ರುವ ಪಟ್ಲಾಶ್ರಯ” ಯೋಜನೆ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ 100 ಮನೆಗಳ ಪೈಕಿ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಮ್.ಎಲ್. ಸಾಮಗರು ದಾನವಾಗಿ ನೀಡಿದ ಕೊಡವೂರಿನ ಲಕ್ಷ್ಮೀನಗರ ಗರ್ಡೆ ಬಳಿಯ 50 ಸೆಂಟ್ಸ್ ಜಾಗದಲ್ಲಿ 20 ಮನೆಗಳ ಗೃಹಸಮುಚ್ಚಯಕ್ಕೆ ಎ.19 ರಂದು ಬೆಳಗ್ಗೆ 10 ಗಂಟೆಗೆ ಶೃಂಗೇರಿ ಶ್ರೀ ಶಾರದಾ ಪೀಠಧೀಶ್ವರ ಶ್ರೀ ವಿಧುಶೇಖರಭಾರತೀಸ್ವಾಮಿಗಳು ಭೂಮಿ ಪೂಜೆಯನ್ನು ನೆರವೇರಿಸಲಿದ್ದಾರೆ ಎಂದು ಟ್ರಸ್ಟ್‌ನ ಉಡುಪಿ ಘಟಕದ ಅಧ್ಯಕ್ಷ ಇಂದ್ರಾಳಿ ಜಯಕರ್ ಶೆಟ್ಟಿ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಗ್ಗೆ 9 ರಿಂದ ತೆಂಕು-ಬಡಗು ” ನಾದವೈಕುಂಠ” ಕಾರ್ಯಕ್ರಮ ನಡೆಯಲಿದೆ. ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಸ್ಥಳದಾನಿ ಪ್ರೋ.ಎಮ್ಎಲ್ ಸಾಮಗ ದಂಪತಿಗಳು, ಟ್ರಸ್ಟ್‌ನ ಗೌರವಾಧ್ಯಕ್ಷ ಡಾ. ಸದಾಶಿವ ಶೆಟ್ಟಿ ಕನ್ಯಾನ, ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಸೇರಿದಂತೆ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ಹರಿಪ್ರಸಾದ್ ರೈ, ಮಹಿಳಾ ವಿಭಾಗದ ಅಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಡಾ.ವಿಟ್ಲ ಹರೀಶ್ ಜೋಷಿ, ಸಂಚಾಲಕ ಸುಧಾಕರ್ ಆಚಾರ್ಯ ಉಪಸ್ಥಿತರಿದ್ದರು.