ಉಡುಪಿ:ನವೀನತೆ ಮೂಲಕ ಕಲ್ಪನೆಗಳ ರೂಪಣೆ ಮತ್ತು ಸಮಸ್ಯೆಗಳ ಗುರುತಿಸುವಿಕೆ ಬಗ್ಗೆ ಕಾರ್ಯಾಗಾರ

ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗವು ಐಎಸ್‌ಟಿಇ ವಿದ್ಯಾರ್ಥಿ ಘಟಕ ಮತ್ತು ಪಠ್ಯೇತರ ಚಟುವಟಿಕೆ ವಿಭಾಗದ ಸಹಯೋಗದೊಂದಿಗೆ , 20 ಫೆಬ್ರವರಿ 2026 ರಂದು “ನವೀನತೆ
ಮೂಲಕ ಕಲ್ಪನೆಗಳ ರೂಪಣೆ ಮತ್ತು ಸಮಸ್ಯೆಗಳ ಗುರುತಿಸುವಿಕೆ” ಎಂಬ
ವಿಷಯದ ಕುರಿತು ಉಪನ್ಯಾಸವನ್ನು ಆಯೋಜಿಸಲಾಗಿತ್ತು.

ಈ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೈಂಟ್ ಜೋಸೆಫ್ ಇಂಜಿನಿಯರಿ೦ಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಆಲ್ಡಿçನ್ ಕ್ಲೇಟಸ್ ವಾಜ್ ಇವರು ಭಾಗವಹಿಸಿದ್ದರು.

ಇವರು ಐಒಟಿ ಎಂಬಡೆಡ್ ಸಿಸ್ಟಮ್ಸ್, ವಿದ್ಯಾರ್ಥಿಗಳು ಅಂಕಗಳ ಚಾಲಿತ ಹಾಗೂ ಅಂಕ ಆಧಾರಿತ ಯೋಜನೆಗಳಿಂದ ನೈಜ ಪ್ರಪಂಚದ ಪ್ರಭಾವದೊಂದಿಗೆ ಸಮಸ್ಯೆ ಆಧಾರಿತ ಚಿಂತನೆಗೆ ಬದಲಾಯಿಸಲು, ಉತ್ತಮ ಯೋಜನಾ ಸಮಸ್ಯೆಗಳಿಗೆ ಚೌಕಟ್ಟುಗಳನ್ನು ಮತ್ತು
ಸಮಸ್ಯೆ ಹೇಳಿಕೆ ಸೂತ್ರವನ್ನು ಪರಿಚಯಿಸಲು ಪ್ರೋತ್ಸಾಹಿಸಿದರು ಮತ್ತು ಪೇಟೆಂಟ್ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾದ ಶ್ರೀ ಅರುಣ್ ಉಪಧ್ಯಾಯ ವಹಿಸಿದ್ದರು, ವಿದ್ಯಾರ್ಥಿನಿಯಾದ ಶ್ರಾವ್ಯ ತಂತ್ರಿ ನಿರೂಪಿಸಿದರು.