ಉಡುಪಿ: ಮಹಿಳೆ ನಾಪತ್ತೆ

ಉಡುಪಿ: ಉಡುಪಿ ತಾಲೂಕು ಕಚೇರಿಯಲ್ಲಿ ಆಹಾರ ಶಾಖೆಯಲ್ಲಿ ಎಸ್,ಡಿ,ಎ ಆಗಿ ಕೆಲಸ ಮಾಡುತಿದ್ದ ಮೌನ (28) ಎಂಬ ಮಹಿಳೆಯು ಫೆಬ್ರವರಿ 15 ರಂದು ಎಂದಿನಂತೆ ಕಚೇರಿಗೆ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ 12 ಗಂಟೆಗೆ ಕಚೇರಿಯಿಂದ ಹೊರಗೆ ಹೋದವರು ವಾಪಾಸು ಬಾರದೇ ಕಾಣೆಯಾಗಿರುತ್ತಾರೆ.

5 ಅಡಿ 1 ಇಂಚು ಎತ್ತರ, ಕಪ್ಪು ಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕೆಂಪು ಚೂಡಿದಾರ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.