ಉಡುಪಿ ನಿಟ್ಟೂರಿನ ಸ್ತ್ರೀ ಸೇವಾ ನಿಕೇತನದ ಮಹಿಳೆಯೋರ್ವಳು ನಾಪತ್ತೆಯಾಗಿರುವ ಘಟನೆ ಉಡುಪಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಫೆ. 7ರಂದು ನಡೆದಿದೆ.
ನಳಿನಿ ದೇವಾಡಿಗ ನಾಪತ್ತೆಯಾದ ಯುವತಿ. ಇವರು ಮೂಕಿಯಾಗಿದ್ದು, ಐದು ದಿನಗಳ ಹಿಂದೆಯಷ್ಟೇ ಸ್ತ್ರೀ ಸೇವಾ ನಿಕೇತನಕ್ಕೆ ದಾಖಲಾಗಿದ್ದರು.
ಫೆ.7ರಂದು ಬೆಳಿಗ್ಗೆ 10 ಗಂಟೆಗೆ ಆರೋಗ್ಯ ತಪಾಸಣೆಗಾಗಿ ನಳಿನಿ ಅವರನ್ನು ನಿಕೇತನದ ಮಹಿಳಾ ರಕ್ಷಕಿ ವೀಣಾ ಎಂಬವರು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ನಳಿನಿ ಮಧ್ಯಾಹ್ನ 12.15ರ ಸುಮಾರಿಗೆ ವೀಣಾ ಅವರ ಕಣ್ಣುತಪ್ಪಿಸಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ ಎಂದು ನಿಟ್ಟೂರು ಮಹಿಳಾ ನಿಯಲದ ಅಧೀಕ್ಷಕಿ ಲೀಲಾವತಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.