ಉಡುಪಿ: ವೀಕೆಂಡ್ ಕರ್ಫ್ಯೂ; ಬಸ್ ಸಂಚಾರ ಬಹುತೇಕ ಬಂದ್.!

ಉಡುಪಿ: ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರುವುದರಿಂದ ಖಾಸಗಿ ಬಸ್ ಸಂಚಾರ ಬಹುತೇಕ ಬಂದ್ ಆಗಲಿದೆ.
ಬಸ್‌ ಪ್ರಯಾಣಕ್ಕೆ ಅನುಮತಿ ಇದ್ದರೂ ಜನಸಂಚಾರ ಕಡಿಮೆ ಇರುವುದರಿಂದ ಎಲ್ಲ ಬಸ್ಸುಗಳು ಸಂಚರಿಸುವುದಿಲ್ಲ. ಕೆಲವೊಂದು ಬಸ್ಸುಗಳು ಸಂಚರಿಸುವ ಸಾಧ್ಯತೆ ಇದೆ.

ಉಡುಪಿ ಸಿಟಿ ಬಸ್‌ ಮತ್ತು ಕೆನರಾ ಬಸ್‌ ಮಾಲೀಕರ ಸಂಘದ ಬಸ್ ಗಳ ಸಂಚಾರ ಇರುವುದಿಲ್ಲ ಎಂದು ಸಿಟಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ಮತ್ತು ಕೆನರಾ ಬಸ್‌ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ ನಾಯಕ್‌ ತಿಳಿಸಿದ್ದಾರೆ.

ಕರಾವಳಿ ಬಸ್‌ ಮಾಲೀಕರ ಸಂಘದ ಬಸ್ಸುಗಳನ್ನು ಓಡಿಸಲಾಗುತ್ತದೆ ಎಂದು ಸಂಘದ ಅಧ್ಯಕ್ಷ ರಾಘವೇಂದ್ರ ಭಟ್‌ ತಿಳಿಸಿದ್ದಾರೆ.