ಉಡುಪಿ ಜಿಲ್ಲಾ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಸಂಸ್ಥೆಯ ನೂತನ ಗೌರವಾಧ್ಯಕ್ಷರಾಗಿ ಸಂದೇಶ್ ಬಲ್ಲಾಳ್‌, ಅಧ್ಯಕ್ಷರಾಗಿ ವಿವೇಕ್ ಸುವರ್ಣ ಆಯ್ಕೆ

ಉಡುಪಿ:ಉಡುಪಿಯ ಜಿಲ್ಲಾ ಮೊಬೈಲ್ ರಿಟೈಲರ್ಸ್ ಅಸೋಯೇಷನ್ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸೆಪ್ಟಂಬರ್ 3 ರಂದು ಉಡುಪಿಯ ಟೌನ್‌ ಹಾಲ್ ನಲ್ಲಿ ನಡೆಯಲಿದೆ.

ಉಡುಪಿ ಜಿಲ್ಲಾ ಮೊಬೈಲ್ ರಿಟೈಲರ್ಸ್ ಅಸೋಯೇಷನ್‌ ಇದರ ನೂತನ ಗೌರವಾಧ್ಯಕ್ಷರಾಗಿ ಉಡುಪಿ ಬಲ್ಲಾಲ್‌ ಮೊಬೈಲ್ಸ್ ಮಾಲಕರಾದ ಶ್ರೀ ಸಂದೇಶ್ ಬಲ್ಲಾಳ್ ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ರಾಜೇಶ್ ಮೆಬಿಯನ್, ಸಲೀಂ, ಪ್ರಶಾಂತ್ ಕಿಣಿ ಆಯ್ಕೆಯಾಗಿದ್ದಾರೆ.

ಅಸೋಸಿಯೇಷನ್ನಿನ ನೂತನ ಅಧ್ಯಕ್ಷರಾಗಿ ವಿವೇಕ್ ಜಿ ಸುವರ್ಣ, ಕಾರ್ಯದರ್ಶಿಯಾಗಿ ಖಾದರ್,ಖಜಾಂಚಿಯಾಗಿ ಇಮ್ರಾನ್, ಜೊತೆ ಕಾರ್ಯದರ್ಶಿಯಾಗಿ ಸುದರ್ಶನ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ರಂಜಿತ್ ಶೆಟ್ಟಿ, ರಾಹುಲ್,ಗಣೇಶ್ ಧನಂಜಯ್ ಆಯ್ಕೆಯಾಗಿದ್ದಾರೆ.

ಕುಂದಾಪುರ ವಲಯದ ಅಧ್ಯಕ್ಷರಾಗಿ ಮಹೇಶ್‌ ಪೂಜಾರಿ,ಕಾರ್ಕಳ ವಲಯ ಅಧ್ಯಕ್ಷರಾಗಿ ಅಜಿತ್ ಕುಮಾ‌ರ್,ಮಲ್ಪೆ ವಲಯದ ಅಧ್ಯಕ್ಷರಾಗಿ ಜಾಯೆಲ್ ಅಮಣ್ಯಕಾಪು ವಲಯದ ಅಧ್ಯಕ್ಷರಾಗಿ ಶ್ರೀಕಾಂತ್,ಬ್ರಹ್ಮಾವರ ವಲಯ ಅಧ್ಯಕ್ಷರಾಗಿ ವೆಂಕಟೇಶ್‌ ಪೂಜಾರಿ,ಮಣಿಪಾಲ ವಲಯದ ಅಧ್ಯಕ್ಷರಾಗಿ ಪ್ರಶಾಂತ್ ಆಯ್ಕೆಯಾಗಿದ್ದಾರೆ.

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಸೆಪ್ಟೆಂಬರ್ 3 ರಂದು ಸಂಜೆ 6 ಗಂಟೆಗೆ ಉಡುಪಿಯ ಟೌನ್ ಹಾಲ್ ನಲ್ಲಿ ನಡೆಯಲಿದೆ.