ಉಡುಪಿ: ಮಕ್ಕಳ ಜೊತೆ ಹಿರಿಯ ನಟ ಪ್ರಕಾಶ್ ರಾಜ್ ಡ್ಯಾನ್ಸ್ – ವಿಡಿಯೋ ವೈರಲ್

ಉಡುಪಿ: ಕರಾವಳಿಯಲ್ಲಿ ನಟ ಪ್ರಕಾಶ್ ರಾಜ್ ನಿರ್ದಿಗಂತ ಹುಟ್ಟು ಹಾಕಿದ್ದಾರೆ. ರಂಗ ಚಟುವಟಿಕೆಗೆಂದೇ ಈ ಸಂಸ್ಥೆ ತಲೆ ಎತ್ತಿದ್ದು ಕಳೆದ ಕೆಲವು ದಿನಗಳಿಂದ ಇಲ್ಲಿ ರಂಗ ಚಟುವಟಿಕೆ ನಡೆಯುತ್ತಿದೆ.

ಉಡುಪಿ ಬೆಳ್ಳಂಪಳ್ಳಿಯ ನಿರ್ದಿಗಂತದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರ ‘ಕಾವು ಗೂಡು-2026’ ಇದರ ಸಮಾರೋಪ ಸಮಾರಂಭದಲ್ಲಿ ಪ್ರಕಾಶ್ ರಾಜ್ ಮಕ್ಕಳ ಜೊತೆ ಮಗುವಾಗಿ ಕುಣಿದದ್ದು ವೈರಲ್ ಆಗುತ್ತದೆ.

ಈ ಶಿಬಿರವನ್ನು ಮಕ್ಕಳಿಗಾಗಿಯೇ ಆಯೋಜಿಸಲಾಗಿದ್ದು ಸಮಾರೋಪದಲ್ಲಿ ಖುದ್ದು ಭಾಗವಹಿಸಿ ಎಲ್ಲವನ್ನೂ ಮರೆತು ಮಕ್ಕಳ ಜೊತೆ ಕುಣಿದದ್ದು ಅಲ್ಲಿದ್ದ ಮಕ್ಕಳು ಮತ್ತು ಪೋಷಕರ ಮನಸೂರೆಗೊಂಡಿತು. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.