ಉಡುಪಿ:ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತ ಕಲ್ಪೋಕ್ತ ಪೂಜೆಯು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಮಹಾ ಅನ್ನಸಂತರ್ಪಣೆಯೊಂದಿಗೆ ನೆರವೇರಲಿದೆ.
ಆಗಸ್ಟ್ ತಿಂಗಳ 8ನೇ ತಾರೀಖಿನ ಶುಕ್ರವಾರದಂದು ಸಂಜೆ ಗಂಟೆ 5 ರಿಂದ ಪೂಜೆ ಆರಂಭಗೊಳ್ಳಲಿದೆ.ಕುಬೇರ ಚಿತ್ರಲೇಖ ಸಹಿತವಾದ ಮಹಾಲಕ್ಷ್ಮಿಯ ವಿಶೇಷ ಸನ್ನಿಧಾನದಲ್ಲಿ ಈ ಪೂಜೆ ನೆರವೇರಲಿದೆ.ಸಾಮೂಹಿಕವಾಗಿ ನೆರವೇರಲಿರುವ ಈ ವ್ರತ ಕಲ್ಪೋಕ್ತ ಪೂಜೆಯಲ್ಲಿ ಸರ್ವರಿಗೂ ಸೇವೆ ನೀಡಲು ಅವಕಾಶವಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.












