ಉಡುಪಿ,ಜು.17: ಇಂದ್ರಾಳಿ ವಿಭುದಪ್ರೀಯ ನಗರ ಕಾಮಾಕ್ಷಿ ದೇವಸ್ಥಾನದ ಬಳಿ ಇರುವ ಮನೆಯೊಂದರಲ್ಲಿ ತೋಟದ ಕೆಲಸ ಮಾಡಲು ಹೋದ ವಲಸೆ ಕಾರ್ಮಿಕರೊಬ್ಬರು ಇದ್ದಕಿದ್ದಂತೆ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಮೃತ ವ್ಯಕ್ತಿಯು ಬಾಗಲಕೊಟೆ ಜಿಲ್ಲೆಯ ಶಿವಪ್ಪ (65) ಎಂದು ಗುರುತಿಸಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಶವಗಾರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಉಚಿತ ಅಂಬುಲೇನ್ಸ್ ಸೇವೆ ನೀಡಿ, ಇಲಾಖೆಗೆ ಸಹಕರಿಸಿದ್ದಾರೆ.