ಉಡುಪಿ: ಉದ್ಯಾವರ ಭಾಗದಲ್ಲಿ ಫಿಶ್ ಮಿಲ್ ಆರಂಭಿಸಲು ನನ್ನ ವಿರೋಧ ವಿದೆ. ಈವರೆಗೆ ಯಾವುದೇ ಫಿಶ್ ಮಿಲ್ ಆರಂಭಿಸಲು ಅನುಮತಿ ನೀಡಿಲ್ಲ ಎಂದು ಜಿಪಂ ಅಧ್ಯಕ್ಷ ದಿನಕರ ಬಾಬು ಸ್ಪಷ್ಟ ಪಡಿಸಿದ್ದಾರೆ.
ಈ ಹಿಂದೆ ಉದ್ಯಾವರದಲ್ಲಿ ನಡೆದ ಫಿಶ್ ಮಿಲ್ ಹೋರಾಟದಲ್ಲಿ ನಾನೂ ಕೂಡ ಭಾಗಿಯಾಗಿದ್ದೆ. ಪ್ರಸ್ತುತ ಯಾವುದೇ ಫಿಶ್ ಮಿಲ್ ಗೆ ಪರವಾನಗಿ ನೀಡಿಲ್ಲ, ಕೆಲವೊಂದು ವರ್ಗದವರ ಬೇಡಿಕೆಗೆ ಸ್ಪಂದಿಸಿ ಫಿಶ್ ಮಿಲ್ ಹೊರತುಪಡಿಸಿ ಕೈಗಾರಿಕಾ ವಲಯಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ನಾನು ಅಧಿಕಾರದಲ್ಲಿ ಇರುವವರೆಗೂ ಫಿಶ್ ಮಿಲ್ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಉದ್ಯಾವರ ಜನತೆಗೆ ಭರವಸೆ ನೀಡಿದ್ದಾರೆ.