ಉಡುಪಿ ಫೆಬ್ರವರಿ 20 (ಕ.ವಾ): ಕರ್ನಾಟಕ ಮಾಧ್ಯಮ ಅಕಾಡೆಮಿಯು ಮೈಸೂರು ವಿಭಾಗ ಮಟ್ಟದ ಪತ್ರಕರ್ತರಿಗೆ ಸಂವಿಧಾನ ಮತ್ತು ಪತ್ರಿಕೋದ್ಯಮ, ಫ್ಯಾಕ್ಟ್ ಚೆಕ್ ಹಾಗೂ ಬದಲಾಗುತ್ತಿರುವ ಪತ್ರಿಕೋದ್ಯಮದಲ್ಲಿ ಭಾಷೆ ಬಳಕೆ ಕುರಿತಂತೆ ಫೆಬ್ರವರಿ 27 ರಂದು, ಕೊಡಗಿನಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಿದೆ. ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ತರಬೇತಿ ಸಹಕಾರಿಯಾಗಲಿದೆ.
ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಮೈಸೂರು ವಿಭಾಗದ (ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು,
ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ) ಜಿಲ್ಲೆಯ ಪತ್ರಕರ್ತರು ಗೂಗಲ್ ಫಾರ್ಮ್ https://forms.gle/ZJ4X7NjBodXmzeUu5 ನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸುವ ಅವಧಿಯನ್ನು ಫೆಬ್ರವರಿ 22 ರ ವರೆಗೆ ವಿಸ್ತರಿಸಲಾಗಿದೆ.
ತರಬೇತಿಯ ಆಯ್ಕೆ ಕುರಿತಂತೆ ಅಕಾಡೆಮಿಯ ತೀರ್ಮಾನವೇ ಅಂತಿಮ ಎಂದು ಅಕಾಡೆಮಿಯ ಕಛೇರಿ ಪ್ರಕಟಣೆ ತಿಳಿಸಿದೆ.
















