ಬ್ರಹ್ಮಾವರ: ಗ್ರಾಮೀಣ ಪ್ರದೇಶದ ಯುವಕರಿಗೆ ಕೌಶಲ್ಯಾಧಾರಿತ ವೃತ್ತಿ ತರಬೇತಿಯನ್ನು ನೀಡುತ್ತಿರುವ ಬಾರ್ಕೂರು ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಗೆ ಜಿಲ್ಲೆಯಲ್ಲೇ ಅಗ್ರಮಾನ್ಯ ಗ್ರೇಡಿಂಗ್ ಲಭಿಸಿದೆ.
ಕೇಂದ್ರ ಸರ್ಕಾರದ ಡಿಜಿಟಿ ಇಲಾಖೆಯಿಂದ ನಡೆಸಿದ 2019-20ರ ಗ್ರೇಡಿಂಗ್ ಪರಿವೀಕ್ಷಣೆಯಲ್ಲಿ ಸಂಸ್ಥೆಯು ಉಡುಪಿ ಜಿಲ್ಲೆಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗೂ ಉದ್ಯೋಗ ಇಲಾಖೆಯ ಅಧೀನದಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ಮಟ್ಟದ ಕೌಶಲ ತರಬೇತಿಯನ್ನು ರಾಜ್ಯ ಸರಕಾರದ ಕೌಶಲ ತರಬೇತಿ ಮತ್ತು ಉದ್ಯೋಗ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಮಟ್ಟದ ಸಂಸ್ಥೆಯಾಗಿದೆ.
ಪ್ರಸ್ತುತ ವಿದ್ಯಮಾನದಲ್ಲಿ ಅತೀ ಬೇಡಿಕೆಯಿರುವ ಆಟೋಮೊಬೈಲ್ ಫ್ಯಾಬ್ರಿಕೇಶನ್ ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್, ಮೆಕ್ಯಾನಿಕ್, ಮೆಕ್ಯಾನಿಕಲ್ (ಫಿಟ್ಟರ್) ವೃತ್ತಿಗಳಲ್ಲಿ ತರಬೇತಿ ನೀಡುತ್ತಿದ್ದು, ತರಬೇತಿ ಆನಂತರ ವಿವಿಧ ಇಂಡಸ್ಟ್ರಿ ಹಾಗೂ ಕಂಪನಿಗಳಲ್ಲಿ ಉದ್ಯೋಗ ಅವಕಾಶ, ಕ್ಯಾಂಪಸ್ ನೇಮಕಾತಿಗಳ ಮೂಲಕ ಉದ್ಯೋಗಕ್ಕೆ ಕಳುಹಿಸಲಾಗುವುದು. ಸ್ವ-ಉದ್ಯೋಗಕ್ಕೆ ಆದ್ಯತೆ ನೀಡಿ ಮಾರ್ಗದರ್ಶನ ನೀಡಲಾಗುತ್ತದೆ.
ಸಂಸ್ಥೆಯಲ್ಲಿ 2020-21ರ ಸಾಲಿಗಾಗಿ ಈ ಮೇಲೆ ತಿಳಿಸಿದ ವಿವಿಧ ವೃತ್ತಿಗಳಲ್ಲಿ ತರಬೇತಿ ಪಡೆಯಲು ಇಚ್ಚಿಸುವ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸುತ್ತಿದ್ದು, ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಖುದ್ದಾಗಿ ಸಂಸ್ಥೆಗೆ ಬಂದು ಅಥವಾ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು ಎಂದು ಪ್ರಾಚಾರ್ಯ ದಿನಕರ್ ತೋಳಾರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ M:9902213982