ಉಡುಪಿ: ಇಂದು ಕೋವಿಡ್ ಪ್ರಥಮ ಮತ್ತು ಎರಡನೇ ಡೋಸ್ ಲಸಿಕೆ ಲಭ್ಯತೆ ವಿವರ

ಉಡುಪಿ: ಇಂದು (ಆಗಸ್ಟ್ 11) ಉಡುಪಿ ನಗರ ಪ್ರದೇಶದ ಈ ಕೆಳಗಿನ ಆಸ್ಪತ್ರೆಗಳಲ್ಲಿ ಕೋವಿಡ್-19 ಪ್ರಥಮ ಮತ್ತು 2ನೇ ಡೋಸ್ ಲಸಿಕೆ ಲಭ್ಯ ವಿದೆ.

ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ (ಸೇಂಟ್ ಸಿಸಿಲಿ ಶಾಲೆ, ಉಡುಪಿ): ಕೋವಿಶೀಲ್ಡ್ ಪ್ರಥಮ ಡೋಸ್- (200)

ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ (ಮಾಧವ ಕೃಪಾ ಶಾಲೆ, ಮಣಿಪಾಲ): ಕೋವಿಶೀಲ್ಡ್ 2ನೇ ಡೋಸ್ – (100) ಕೋವ್ಯಾಕ್ಸಿನ್ 2ನೇ ಡೋಸ್ – (200)

ಶಾರದ ಕಲ್ಯಾಣ ಮಂಟಪ, ಕುಂಜಿಬೆಟ್ಟು ಉಡುಪಿ: ಕೋವಿಶೀಲ್ಡ್ ಪ್ರಥಮ ಡೋಸ್ – (100) ಕೋವಿಶೀಲ್ಡ್ 2ನೇ ಡೋಸ್- (200 ಲಭ್ಯ)

ಎಲ್.ವಿ.ಪಿ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು, ಉಡುಪಿ: ಕೋವಿಶೀಲ್ಡ್ 1 ಮತ್ತು 2ನೇ ಡೋಸ್ – (300)

ಎಫ್.ಪಿ.ಎ.ಐ ಕುಕ್ಕಿಕಟ್ಟೆಯಲ್ಲಿ (ಇಂದಿರಾನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಇಂದಿರಾನಗರ): ಕೋವಿಶೀಲ್ಡ್ 2ನೇ ಡೋಸ್-(150)

ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆ, ಉಡುಪಿ: ಸಮಯ: ಬೆಳಿಗ್ಗೆ 10.00 ರಿಂದ ಅಪರಾಹ್ನ 1.00 ರವರೆಗೆ. ದಿನಾಂಕ 05/09/2021 ರ ಒಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ 200 ಡೋಸ್ ಲಭ್ಯ ವಿದೆ.

ಹಾಗೂ ಗ್ರಾಮೀಣ ಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟವರು ಕೋವಿಡ್-19 ಪ್ರಥಮ ಮತ್ತು 2ನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.