ಹುಲಿವೇಷಧಾರಿಗಳ ಟೆಂಪೋ ಪಲ್ಟಿ; ಓರ್ವ ಸಾವು, ಹಲವರಿಗೆ ಗಾಯ

ಉಡುಪಿ: ಹುಲಿವೇಷ ತಂಡ ಹೋಗುತ್ತಿದ್ದ ಟೆಂಪೋ ಪಲ್ಟಿಯಾಗಿ ಓರ್ವ ಮೃತಪಟ್ಟು ಹಲವು ಮಂದಿ ಗಾಯಗೊಂಡ ಘಟನೆ ಸಂತೆಕಟ್ಟೆ ನೇಜಾರು ಸಮೀಪ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಹುಲಿವೇಷಧಾರಿ‌ ಪಡುಬಿದ್ರಿಯ ಸುಮಂತ್ (22) ಮೃತಪಟ್ಟವರು.  ಗಾಯಗೊಂಡ ಹುಲಿವೇಷಧಾರಿಗಳು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಣೇಶೋತ್ಸವ ವಿಸರ್ಜನೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಹುಲಿವೇಷಧಾರಿಗಳನ್ನು ಹೊತ್ತ ಟೆಂಪೋ ನೇಜಾರಿನಿಂದ ಸಂತೆಕಟ್ಟೆಗೆ ಹೋಗುತ್ತಿತ್ತು ಎನ್ನಲಾಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಟೆಂಪೋ ರಸ್ತೆಯ ಬದಿ ಪಲ್ಟಿ ಆಯಿತು ಎಂದು ತಿಳಿದುಬಂದಿದೆ. ಪರಿಣಾಮ ಗಂಭೀರಗಾಯಗೊಂಡ ಸುಮಂತ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ಹಾಗೂ ಮಲ್ಪೆ ಪೊಲೀಸರು ಆಗಮಿಸಿದ್ದಾರೆ.