ಉಡುಪಿ: ಉಡುಪಿ ನಗರದ ಗೀತಾಂಜಲಿ ರಸ್ತೆಯ ಪಿವಿಎಸ್ ಟವರ್(ಟಿವಿಎಸ್ ಮೋಟರ್ಸ್ ಶೋರೂಮ್ ಎದುರು)ನಲ್ಲಿ ನೂತನವಾಗಿ ಆರಂಭಿಸಲಾದ ‘ಟಿಡಿಎಫ್ ಡೈಮಂಡ್ಸ್ ಆಂಡ್ ಗೋಲ್ಡ್’ ಮಳಿಗೆಯನ್ನು ಸೋಮವಾರ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಗುರ್ಮೆ ಸುರೇಶ್ ಶೆಟ್ಟಿ, ಈ ಸಂಸ್ಥೆಯು ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದಂತೆ ಗ್ರಾಹಕ ಸ್ನೇಹಿ ವ್ಯವಹಾರ ಮಾಡಿಕೊಂಡು ಬಂದಿದ್ದು, ಆಭರಣ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಗಳಿಸಿದೆ. ಎಲ್ಲರು ಒಂದೇ ಮನಸ್ಸಿನಿಂದ ಒಟ್ಟಾಗಿ ಈ ವ್ಯವಹಾರವನ್ನು ಮುನ್ನಡೆಸುತ್ತಿದ್ದಾರೆ. ಯಾವುದೇ ಉದ್ಯಮ ಪರಿಶ್ರಮದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಅದಕ್ಕೆ ಈ ಸಂಸ್ಥೆಯೇ ಸಾಕ್ಷಿ. ಮುಂದೆ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಸಂಸ್ಥೆಯ ಮಾಲಕರು ಹಾಗೂ ಸಹ ಸ್ಥಾಪಕರಾದ ಪ್ರಸನ್ನ ಶೆಟ್ಟಿ, ಗೌತಮ್ ಸಿಂಘ್ವಿ, ಅಸೋಸಿಯೇಟ್ ಪಾರ್ಟನರ್ ಗಳಾದ ವಿರಾಜ್ ಹೆಗ್ಡೆ, ಸುಧಾ ಶೆಟ್ಟಿ, ಪ್ರಮುಖರಾದ ಡಿಂಪಿ, ಶ್ವೇತಾ, ರೋಶನಿ, ಪ್ರೇಮಲತಾ ಎಸ್.ಹೆಗ್ಡೆ, ಜಯಲಕ್ಷ್ಮೀ ಜೆ.ಹೆಗ್ಡೆ, ಉಷಾಲತಾ ಎನ್. ಶೆಟ್ಟಿ, ಕೃಷ್ಣ ಕುಮಾರಿ ಮೊದಲಾದವರು ಉಪಸ್ಥಿತರಿದ್ದರು.
1999ರಿಂದ ಆಭರಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಟಿಡಿಎಫ್ ಡೈಮಂಡ್ಸ್ ಆಂಡ್ ಗೋಲ್ಡ್ 26 ವರ್ಷಗಳ ಅನುಭವ ಮತ್ತು ವಿಶ್ವಾಸವನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ ಆರು ಹಾಗೂ ಕರ್ನಾಟಕದಲ್ಲಿ ಮಂಗಳೂರು ಮತ್ತು ಉಡುಪಿಯಲ್ಲಿ ಶಾಖೆಗಳನ್ನು ಹೊಂದಿದೆ. ಕಳೆದ 16 ವರ್ಷಗಳಿಂದ ಉಡುಪಿಯಲ್ಲಿ ಚಿನ್ನಾಭರಣಗಳ ಪ್ರದರ್ಶನ ಮಾಡುತ್ತಿದ್ದ ಈ ಸಂಸ್ಥೆ ಇದೀಗ ಸ್ವಂತ ಮಳಿಗೆಯಲ್ಲಿ ಆರಂಭಿಸಿದೆ.

ಉಡುಪಿ ಮಳಿಗೆಯ ಉದ್ಘಾಟನಾ ಸಂದರ್ಭದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಮೇಕಿಂಗ್ ಚಾರ್ಜ್ಗಳ ಮೇಲೆ ಶೇ.100ರ ವರೆಗೆ ಕ್ಯಾಶ್ ಬ್ಯಾಕ್ ನೀಡಲಾಗುವುದು. ಬ್ರೈಡಲ್ ಜ್ಯುವೆಲ್ಲರಿ, ವಜ್ರ, ಚಿನ್ನ ಹಾಗೂ ಬೆಳ್ಳಿಯ ವಿನೂತನ ಶೈಲಿಯ ಆಭರಣಗಳ ಸಂಗ್ರಹ ಇಲ್ಲಿವೆ ಎಂದು ಪಾಲುದಾರ ವಿರಾಜ್ ಹೆಗ್ಡೆ ತಿಳಿಸಿದ್ದಾರೆ.


















