ಉಡುಪಿ:ಮಂಜುನಾಥ ಐ-ಕೇರ್ ಸೂಪರ್ ಸ್ಪೆಷಾಲಿಟಿ ಸಂಸ್ಥೆಯ ಸುರತ್ಕಲ್ ಶಾಖೆಯ ಶುಭಾರಂಭ

ಉಡುಪಿ:ಉಡುಪಿ,ಕುಂದಾಪುರಗಳಲ್ಲಿ ಎರಡು ಶಾಖೆ ಹೊಂದಿ ಕಳೆದ ಸುಮಾರು 20 ವರ್ಷಗಳಿಂದ ಮನೆಮಾತಾಗಿರುವ ಮಂಜುನಾಥ ಐ ಕೇರ್ ಸೂಪರ್ ಸ್ಪೆಷಾಲಿಟಿ ಐಕೇರ್ ಸೆಂಟರ್‌ನ ಮೂರನೇ ಸುಸಜ್ಜಿತ ಶಾಖೆ ಸುರತ್ಕಲ್ ಗೋವಿಂದದಾಸ ಕಾಲೇಜು ಎದುರು ರಾಷ್ಟ್ರೀಯ ಹೆದ್ದಾರಿ. ಪಕ್ಕದಲ್ಲಿ ಭಾನುವಾರ ಶುಭಾರಂಭಗೊಂಡಿತು.

ಶಾಸಕ ಡಾ. ಭರತ್ ಶೆಟ್ಟಿ ಶಾಖೆ ಉದ್ಘಾಟಿಸಿ ಮಾತನಾಡಿ, ಸುರತ್ಕಲ್ ಭಾಗದ ಜನರಿಗೆ ಸುಸಜ್ಜಿತ ಐ-ಕೇರ್ ಕೇಂದ್ರವನ್ನು ಸರಿಯಾದ ಜಾಗದಲ್ಲಿ ಈ ಸಂಸ್ಥೆ ಆರಂಭಿಸಿದೆ. ದೇಶದಲ್ಲಿಯೇ ನಂ. 1 ವೈದ್ಯಕೀಯ ಕೇಂದ್ರವಾಗಿ ಮಂಗಳೂರು ಗುರುತಿಸಿಕೊಂಡಿದ್ದು, ಇಲ್ಲಿ ಉತ್ತಮ ಸೇವೆ ನೀಡಿದಲ್ಲಿ ಹೊರ ಜಿಲ್ಲೆಗಳ ಜನರಿಗೂ ಉತ್ತಮ ಸೇವೆ ನೀಡಬಹುದಾಗಿದೆ. ಇಲ್ಲಿ ವಿಶ್ವ ದರ್ಜೆಯ ಸೇವೆ ಒದಗಿಸಿರುವುದು ಶ್ಲಾಘನೀಯ ಎಂದರು.

ಸಂಸ್ಥೆಯ ಡಾ.ಶಕೀಲಾ ಸಚಿನ್ ಮಾತನಾಡಿ, ಸಂಸ್ಥೆ ಸುಮಾರು 20 ವರ್ಷ ಹಿಂದೆ ಆರಂಭಗೊಂಡಿದ್ದು ಉಡುಪಿ, ಕುಂದಾಪುರಗಳಲ್ಲಿ ಸ್ವಂತ ಕಟ್ಟಡದಲ್ಲಿ ಐ-ಕೇರ್ ಸೆಂಟರ್ ಆರಂಭಿಸಿ ಜನರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದೆ. ಇಂದು ತಮಗೆ ಸಂತಸದ ದಿನವಾಗಿದ್ದು ಗ್ರಾಹಕರಿಗೆ ಮಂಗಳೂರು ಬಳಿ ಜನರಿಗೆ ವಿಶ್ವ ದರ್ಜೆಯ ಐ-ಕೇರ್ ಸೇವೆ ನೀಡುವುದು ತನ್ನ ಗಂಡ ಡಾ. ಸಚಿನ್ ರಾಜ್ಕುಮಾರ್ ಕನಸಾಗಿತ್ತು. ಇದಕ್ಕೆ ಸಂಸ್ಥೆಯ ತಜ್ಞ ವೈದ್ಯರು, ಸಿಬ್ಬಂದಿ ಯೋಗದಾನ ನೀಡಲಿದ್ದಾರೆ ಎಂದರು.

ಮಂಗಳೂರಿನ ಇಂಡಿಯಾನ ಆಸತ್ರೆಯ ಸ್ಥಾಪಕ ಎಂಡಿ ಅಂತಾರಾಷ್ಟ್ರೀಯ ಹೃದಯ ಚಿಕಿತ್ಸಾ ತಜ್ಞ ಡಾ. ಯೂಸುಫ್ ಎ. ಕುಂಬ್ಳೆ ಮಾತನಾಡಿ, ಸಂಸ್ಥೆಯಲ್ಲಿ ರಾಜ್ಯದಲ್ಲಿಯೇ ಇಲ್ಲದ ಸುಸಜ್ಜಿತ ಐ-ಕೇರ್ ಸೌಲಭ್ಯ ಒದಗಿಸಿದ್ದಾರೆ ಎಂದು ಅಭಿನಂದಿಸಿದರು.

ಸುರತ್ಕಲ್‌ನ ಖ್ಯಾತ ಹೃದಯ ಚಿಕಿತ್ಸಾ : ತಜ್ಞ ಡಾ. ಸುನಿಲ್ ಕುಮಾರ್ ಮಾತನಾಡಿ,ಸುರತ್ಕಲ್ ಭಾಗಕ್ಕೆ ಉತ್ತಮ ಐ ಕೇರ್ ಸೆಂಟರ್ ಅಗತ್ಯವಿತ್ತು ಎಂದು ಶುಭಹಾರೈಸಿದರು.

ಗೋವಿಂದದಾಸ ಕಾಲೇಜು ಪ್ರಿನ್ಸಿಪಾಲ್ ಹರೀಶ್ ಆಚಾರ್ಯ ಮಾತನಾಡಿ, ಆರೋಗ್ಯ ರಕ್ಷಣೆಗೆ ಪ್ರತಿಯೊಬ್ಬರೂ ಗಮನ ನೀಡಬೇಕಾದ ಅಗತ್ಯವಿದೆ ಎಂದರು.

ಸಂಸ್ಥೆಯ ಡಾ. ಸಚಿನ್ ರಾಜ್ ಕುಮಾರ್, ಡಾ. ಶ್ರುತಿ, ಡಾ. ಅನ್ವಿತಾ ಶೆಟ್ಟಿ ಸಿಬ್ಬಂದಿ ಉಪಸ್ಥಿತರಿದ್ದರು. ಡಾ. ನಿಂತ್ ಶೆಟ್ಟಿ ನಿರೂಪಿಸಿದರು. ಅಖಿಲಾ ಬಳಗ ಪ್ರಾರ್ಥಿಸಿದರು.

ಅತ್ಯಾಧುನಿಕ ಸೌಲಭ್ಯಗಳು

ಹೊಲಿಗೆ ರಹಿತ ಫೆಕೊ ಪೊರೆ ಆಪರೇಶನ್, ರೆಟಿನಾ ಹಾಗೂ ಲೇಸರ್ ಸೌಲಭ್ಯಗಳು, ಮೆಳ್ಳೆಗಣ್ಣಿನ ಶಸ್ತ್ರಚಿಕಿತ್ಸೆ, ಗೊಕೋಮಾ ಸೌಲಭ್ಯಗಳು, ಪೊರೊಸಿನ್ ಆಂಜಿಯೋಗ್ರಾಫ್ ಒಸಿಟಿ, ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷೆ, ತುರ್ತು ಚಿಕಿತ್ಸೆ, ಆಧುನಿಕ ಕನ್ನಡಕದ ಅಂಗಡಿ, ನಗದು ರಹಿತ ವಿಮಾ ಯೋಜನೆಗಳು, ಕಾಂಟ್ಯಾಕ್ಟ್ ಲೆನ್ಸ್‌ಗಳು, ಕಾರ್ನಿಯಲ್ ಟೋಪೋಗ್ರಫಿ ಮತ್ತು ಡೈ ಕಣ್ಣಿನ ಚಿಕಿತ್ಸೆಗಳು ಲಭ್ಯವಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ತನಕ ಸಂಜೆ 4ರಿಂದ 7ರವರೆಗೆ ಸಂಸ್ಥೆ ಕಾರ್ಯನಿರ್ವಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.