ಉಡುಪಿ:ಸುನಾಗ್ ಆಸ್ಪತ್ರೆಯ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಸ್ಪತ್ರೆಯ ಸ್ಥಾಪಕರು ಹಾಗೂ ವೈದ್ಯಾಧಿಕಾರಿಗಳಾದ ಡಾ ನರೇಂದ್ರ ಕುಮಾರ್ ಎಚ್ ಎಸ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು
ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ನಿರ್ದೇಶಕರಾದ ಡಾ ವೀಣಾ ನರೇಂದ್ರ ಎಚ್ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.ನಮ್ಮ ದೇಶದ ಪ್ರಜೆಗಳ ಏಳಿಗೆಯ ಬಗ್ಗೆ ಮಾತುಗಳನ್ನು ಆಡಿದರು.
ಸುನಾಗ್ ಆಸ್ಪತ್ರೆಯು ತನ್ನ ಏಳು ವರ್ಷಗಳ ಸಾರ್ವಜನಿಕ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ಸಂದರ್ಭದಲ್ಲಿ ಡಾ ನರೇಂದ್ರ ಕುಮಾರ್ ಎಚ್ ಎಸ್ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿ ಹಿತವಚನವನ್ನು ನೀಡಿದರು
ಡಾ ಜಯಪ್ರಕಾಶ್ ಬೆಳ್ಳೆ ಇವರು ಭೂ ಸೇನೆ ಜಲ ಸೇನೆ ವಾಯು ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೈನಿಕರ ದೇಶ ಸೇವೆಯ ಬಗ್ಗೆ ಎರಡು ಮಾತುಗಳನ್ನು ಆಡಿದರು ಆಸ್ಪತ್ರೆಯ ವ್ಯವಸ್ಥಾಪಕಿ ಶೋಭಾ ಯು ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಸಲ್ಲಿಸಿದರು.












