ಉಡುಪಿ: ನಗರದ ವಿಎಸ್‌ಟಿ ರಸ್ತೆಯ ಗೀತಾಂಜಲಿ ಸಿಲ್ಕ್ಸ್ ಬಳಿ ವೆಸ್ಟ್ ಕೋಸ್ಟ್ ಕಟ್ಟಡದಲ್ಲಿರುವ ಉಡುಪಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ 10 ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ದಕ್ಷಿಣ ಭಾರತದ ಬೃಹತ್ ಡೈಮಂಡ್ ಎಕ್ಸಿಬಿಷನ್ ‘ವಿಶ್ವ ವಜ್ರ’ವನ್ನು ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸುರೇಶ್ ಶೆಟ್ಟಿ ಗುರ್ಮೆ, ಯಾವುದೇ ಸಂಸ್ಥೆಯ ಒಳ್ಳೆಯ ಆಸ್ತಿ ಅಂದರೆ ಆ ಸಂಸ್ಥೆಯ ಸಿಬ್ಬಂದಿ ವರ್ಗ. ಇವರ ಶ್ರಮ ಹಾಗೂ ಶ್ರದ್ದೆಯು ಸಂಸ್ಥೆಯ ಹೆಸರನ್ನು ಎತ್ತಿ ಹಿಡಿಯುತ್ತದೆ. ಬದುಕು ಬದಲಾದಂತೆ ನಾವು ಹೆಜ್ಜೆಯನ್ನು ಇಟ್ಟುಕೊಂಡು ಹೋಗಬೇಕು. ಜಾತಿ ಮತ ಮೀರಿದಾಗ ಮಾತ್ರ ಸಮಾಜ ಕಟ್ಟಲು ಸಾಧ್ಯ. ವಿವಿಧ ಧರ್ಮದವರಿಗೆ ವಿವಿಧ ಮಂದಿರಗಳಿದ್ದರೂ ಚಿನ್ನಾಭರಣ ಖರೀದಿಗೆ ಎಲ್ಲ ಧರ್ಮದವರಿಗೂ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಒಂದೇ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಎನ್‌ಟಿಇ ಕಂಪೆನಿಯ ಆಡಳಿತ ಪಾಲುದಾರ ಪರ್ಕಳ ರಜಬ್ ಬ್ಯಾರಿ ತುರ್ಕಿಸ್ ಕಲೆಕ್ಷನ್, ಎನ್‌ಟಿಇ ಕಂಪೆನಿಯ ಆಡಳಿತ ಪಾಲುದಾರ ಮುಹಮ್ಮದ್ ಅಶ್ರಫ್ ಬೆಜ್ಜಿಯಂ ಕಲೆಕ್ಷನ್, ಸೀನಿಯರ್ ಇನ್ಸೂರೆನ್ಸ್ ಕನ್ಸಲ್ಟೆಂಟ್ ಶ್ರೀರಾಮ ರಾವ್ ಮಿಡ್ಲ್ ಈಸ್ಟ್ ಕಲೆಕ್ಷನ್, ಕನ್ನರ್ಪಾಡಿ ಶ್ರೀಜಯದುರ್ಗ ಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕಮಿಟಿಯ ಅಧ್ಯಕ್ಷ ಮುರಲೀಧರ್ ಬಲ್ಲಾಳ್ ಸೋಲಿಟೈರ್ ಕಲೆಕ್ಷನ್, ಕಂಡ್ಲೂರು ಜಾಮೀಯ ಮಸೀದಿ ಅಧ್ಯಕ್ಷ ಎಸ್.ದಸ್ತಗಿರ್ ಸಿಂಗಾಪುರ ಕಲೆಕ್ಷನ್, ಕಾಪು ಅಮೃತರಾಜ್ ಚಾರಿಟೇಬಲ್ ಟ್ರಸ್ಟ್‌ನ ಕೋ ಮ್ಯಾನೇಜಿಂಗ್ ಟ್ರಸ್ಟಿ ಶ್ವೇತಾ ಕೆ. ಯುಎಸ್ ಕಲೆಕ್ಷನ್, ವೈದ್ಯೆ ಡಾ.ಅನುರಾಧಾ ಸೂಡ ಫ್ರೆಂಚ್ ಕಲೆಕ್ಷನ್, ಕುಂದಾಪುರದ ಮೃದುಲ ರಮೇಶ್ ಶೆಟ್ಟಿ ಇಟಾಲಿಯನ್ ಕಲೆಕ್ಷನ್, ಪವರ್ ಸಂಸ್ಥೆಯ ಅಧ್ಯಕ್ಷೆ ತಾರಾ ತಿಮ್ಮಯ್ಯ ಪೊಲ್ಕಿ ಕಲೆಕ್ಷನ್ ಅನಾರವಣಗೊಳಿಸಿದರು.
ವಿಶ್ವ ವಜ್ರ ಪ್ರದರ್ಶನದ ಮೊದಲ ಗ್ರಾಹಕ ಮುಹಮ್ಮದ್ ಫತೀನ್ ಅವರಿಗೆ ವಜ್ರಾಭರಣವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸುಲ್ತಾನ್ ಗ್ರೂಪ್‌ನ ಪ್ರಧಾನ ವ್ಯವಸ್ಥಾಪಕ ಎ.ಕೆ.ಉನ್ನಿತ್ತನ್, ಪ್ರಾದೇಶಿಕ ವ್ಯವಸ್ಥಾಪಕ ಸುಮೇಶ್, ಉಡುಪಿಯ ಫ್ಲೋರ್ ಮೆನೇಜರ್ ಸಿದ್ದೀಕ್ ಹಸನ್ ಅಸಿಸ್ಟೆಂಟ್ ಸೇಲ್ ಮೆನೇಜರ್‌ಗಳಾದ ಮುಹಮ್ಮದ್ ಶಾಮೀಲ್ ಅಬ್ದುಲ್ ಖಾದರ್, ನಝೀರ್ ಅದ್ದೂರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸುಲ್ತಾನ್ ಗೋಲ್ಡ್‌ನ ಉಡುಪಿ ಬ್ರಾಂಚ್ ಮೆನೇಜರ್ ಮುಹಮ್ಮದ್ ಅಜ್ಮಲ್ ಸ್ವಾಗತಿಸಿದರು. ಲವಿನಾ ಮಿನೇಜಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಅ. 30ರವರೆಗೆ ನಡೆಯಲಿರುವ ಈ ಪ್ರದರ್ಶದಲ್ಲಿ ಪ್ರತಿ ಡೈಮಂಡ್ ಕ್ಯಾರಟ್ ಖರೀದಿಯಲ್ಲಿ 7500ರೂ. ರಿಯಾಯಿತಿ ನೀಡಲಾಗುವುದು. ಈ ಪ್ರದರ್ಶನದಲ್ಲಿ ಇಟಲಿ, ಫ್ರಾನ್ಸ್, ಯುಎಸ್, ಬೆಲ್ಜಿಯಂ, ಸಿಂಗಾಪುರ, ಟರ್ಕಿ, ಮಿಡ್ಲ್ ಈಸ್ಟ್ ಡೈಮಂಡ್ ಜ್ಯುವೆಲ್ಲರಿಗಳ ಸಂಗ್ರಹಗಳಿವೆ. ಅದೇ ರೀತಿ ಮೆಟ್ರೋ ಟ್ರೆಂಡ್ ಕಲೆಕ್ಷನ್, ಸೋಲಿಟೈರ್ ಕಲೆಕ್ಷನ್, ಸೆಲೆಬ್ರಿಟಿ ಕಲೆಕ್ಷನ್ಸ್, ಬ್ರೈಡಲ್ ಕಲೆಕ್ಷನ್ಸ್, ಲೆಗಸ್ಸಿ ಪೊಲ್ಕಿ ಕಲೆಕ್ಷನ್ಸ್, ಟ್ರೆಡಿಶನಲ್ ಕಲೆಕ್ಷನ್ಸ್, ತನ್ಮನಿಯ ಕಲೆಕ್ಷನ್ಸ್, ಲೈಟ್‌ವೆಹಿಟ್ ಡೈಲಿ ವೇರ್, ಆಫೀಸ್ ವೇರ್ ಮತ್ತು ಕಾಲೇಜು ವೇರ್ ಕೆಲೆಕ್ಷನ್‌ಗಳು ಇಲ್ಲಿವೆ.