ಉಡುಪಿ: ಗಿರಿಜಾ ಹೆಲ್ತ್ ಕೇರ್’ನಲ್ಲಿ ಮತ್ತೆ ಶುಗರ್ ಟೆಸ್ಟಿಂಗ್’ನ ಗ್ಲುಕೊಮೀಟರ್ ಉಚಿತ ಕೊಡುಗೆ

ವೈದ್ಯಕೀಯ ಪರಿಕರಗಳಿಗೆ ಹೆಸರುವಾಸಿಯಾಗಿರುವ ಉಡುಪಿಯ ಗಿರಿಜಾ ಹೆಲ್ತ್ ಕೇರ್ ಆ್ಯಂಡ್ ಸರ್ಜಿಕಲ್ಸ್ ಸಂಸ್ಥೆಯು ಗ್ರಾಹಕರಿಗೆ ಮತ್ತೊಮ್ಮೆ ಶುಗರ್ ಟೆಸ್ಟಿಂಗ್ ಯಂತ್ರವಾದ ಗ್ಲುಕೊಮೀಟರ್ ಉಚಿತ ಬಂಪರ್ ಕೊಡುಗೆ ನೀಡುತ್ತಿದೆ.

ಈ ಹಿಂದೆ ಸಂಸ್ಥೆಯಿಂದ ಹಿರಿಯ ನಾಗರಿಕರಿಗೆ ಗ್ಲುಕೊಮೀಟರ್ ಉಚಿತ ಕೊಡುಗೆ ನೀಡಲಾಗಿದ್ದು, ಇದೀಗ ಮತ್ತೆ ನಾಗರಿಕರ ಒತ್ತಾಯದ ಮೇರೆಗೆ 40 ವರ್ಷ ಮೇಲ್ಪಟ್ಟ ಮಧುಮೇಹ ರೋಗಿಗಳಿಗೆ ಮತ್ತು ಎಲ್ಲಾ ಹಿರಿಯ ನಾಗರಿಕರಿಗೆ ಶುಗರ್ ಟೆಸ್ಟಿಂಗ್ ಯಂತ್ರವಾದ ಗ್ಲುಕೊಮೀಟರ್ ನ್ನು ಉಚಿತವಾಗಿ ನೀಡಲಾಗುತ್ತಿದೆ.

ನಾಗರಿಕರು 200 ರೂ. ಬೆಲೆ ಬಾಳುವ 10 ಟೆಸ್ಟಿಂಗ್ ಸ್ಟ್ರಿಪ್ ಕೊಂಡಲ್ಲಿ ಒಂದು ಗ್ಲುಕೊಮೀಟರ್ ಸೆಟ್ ಉಚಿತವಾಗಿ ದೊರೆಯಲಿದೆ. ಈ ಕೊಡುಗೆ ಮಾರ್ಚ್ 20ರ ವ ರೆಗೆ ಮಾತ್ರ ಲಭ್ಯವಿದ್ದು, ಅರ್ಹ ನಾಗರಿಕರು ತಮ್ಮ ಆಧಾರ್ ಕಾರ್ಡ್ ತೋರಿಸಿ ಈ ಕೊಡುಗೆಯ ಸದುಪಯೋಗ ಪಡೆಯಬಹುದಾಗಿದೆ. ಆದರೆ ಈ ಮೊದಲು ಸಂಸ್ಥೆಯಿಂದ ಗ್ಲುಕೊಮೀಟರ್ ಉಚಿತವಾಗಿ ಪಡೆದುಕೊಂಡವರಿಗೆ ಅವಕಾಶ ಇರುವುದಿಲ್ಲ ಎಂದು ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.