ಉಡುಪಿ: ಮಕ್ಕಳಲ್ಲಿ ಇರುವ ಆಸಕ್ತಿಯನ್ನು ಗಮನಿಸಿ ಅದಕ್ಕೆ ಸೂಕ್ತ ಪ್ರೋತ್ಸಾಹವನ್ನು ಪೋಷಕರು ನೀಡಿದಾಗ ಅವರ ಪ್ರತಿಭೆಗಳು ಅನಾವರಣವಾಗಲು ಸಾಧ್ಯ.ಅಲ್ಲದೆ ಪ್ರತಿಭೆಗೆಗಳು ಬೆಳಕಿಗೆ ಬರಬೇಕಾದರೆ ಅವಕಾಶ ಮತ್ತು ವೇದಿಕೆ ಅಗತ್ಯ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ನಿರಂತರವಾಗಿ ಸಂಗೀತ ಸ್ಪರ್ಧೆಯನ್ನು ಆಯೋಜಿಸಿ ಪ್ರತಿಭೆಗಳ ಅನಾವರಣ ಮಾಡುತ್ತಿರುವುದು ಲಾಗನೆಯ ಎಂದು ತೆಂಕನಿಡಿಯೂರು ಮಹಿಳಾ ಮಂಡಳಿಯ ಅಧ್ಯಕ್ಷೆ ಮಮತಾ ಪಿ ಶೆಟ್ಟಿ ಹೇಳಿದರು.
ಅವರು ಹೆಬ್ರಿಯ ಚಾಣಕ್ಯ ಇನ್ಸ್ಟಿಟ್ಯೂಟ್ ಆಪ್ ಮ್ಯೂಸಿಕ್ ಇವರ ನೇತೃತ್ವದಲ್ಲಿ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ನಡೆಯುವ ವಾಯ್ಸ್ ಆಪ್ ಚಾಣಕ್ಯ 2025 ರಾಜ್ಯ ಮಟ್ಟದ ಸಂಗೀತ ಸ್ಪರ್ಧೆ ಸೀಸನ್ 8ರ ಆಯ್ಕೆ ಪ್ರಕ್ರಿಯೆಯನ್ನು
ಉಡುಪಿ ನೈಸ್ ಕಂಪ್ಯೂಟರ್ ಎಜುಕೇಷನ್ ಸೆಂಟರ್ ನಲ್ಲಿ ಅವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ನೈಸ್ ಕಂಪ್ಯೂಟರ್ ಎಜುಕೇಶನ್ ಇದರ ಆಡಳಿತ ನಿರ್ದೇಶಕ ಸಂದೀಪ್ ಕುಮಾರ್ ಮಾತನಾಡಿ ಯಾವುದೇ ಒಂದು ಕಾರ್ಯಕ್ರಮವನ್ನು ಆರಂಭ ಮಾಡುವುದು ಸುಲಭ ಅಲ್ಲ ಅದನ್ನು ಮತ್ತೆ ಮುಂದುವರೆಸಿಕೊಂಡು ಹೋಗುವುದು ದೊಡ್ಡ ಸಾಧನೆ. ಅಂತಹ ಕೆಲಸವನ್ನು ಚಾಣಕ್ಯ ಸಂಸ್ಥೆ ಮಾಡುತಿದೆ ಎಂದರು.
ಸಮಾರಂಭದಲ್ಲಿ ಕ್ಯಾಂಪ್ಕೋ ಇದರ ನಿಂತಿಕಲ್ ಶಾಖಾಧಿಕಾರಿ ರಮೇಶ್ ಡಿ ಚಾಂತರು, ಸಂಗೀತ ಗುರು ಸ್ಮಿತಾ ಭಟ್ ಉಡುಪಿ, ಚಾಣಕ್ಯ ಸಂಸ್ಥೆಯ ಗೌರವ ಸಲಹೆಗಾರ ಪ್ರವೀಣ್ ಪಾಟೀಲ್, ಚಾಣಕ್ಯ ಮೆಲೋಡಿಸ್ ನ ಗಾಯಕ ಪ್ರಸನ್ನ ಮುನಿಯಾಲ್ ಮೊದಲಾದವರು ಉಪಸ್ಥಿತರಿದ್ದರು.
ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಉಡುಪಿ,ದಕ್ಷಿಣ ಕನ್ನಡ, ಕಾಸರಗೋಡು,ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಸ್ಪರ್ಧಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.


















