ಉಡುಪಿ: ಆಸ್ಟ್ರೇಲಿಯಾದ ಸಿಡ್ನಿ ಮಹಾನಗರದ ಶ್ರೀಪುತ್ತಿಗೆ ಮಠದ ಶ್ರೀವೆಂಕಟಕೃಷ್ಣ ವೃಂದಾವನದಲ್ಲಿ ಪ್ರಥಮವಾಗಿ ವೈಭವದ ಶ್ರೀನಿವಾಸಕಲ್ಯಾಣ ಮಹೋತ್ಸವವು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯಿತು.
ಸುಮಾರು ಎರಡು ಸಾವಿರ ಭಕ್ತರ ಪಾಲ್ಗೊಳ್ಳುವಿಕೆಯಿಂದ ನಡೆದ ಈ ಸಮಾರಂಭದಲ್ಲಿ ಸಿಡ್ನಿ ಮಹಾನಗರದ ಮೇಯರ್ ಹಾಗೂ ಸಂಸದರು ಅಲ್ಲದೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಭಜನೆ ನೃತ್ಯ ಸಂಗೀತ ವಲ್ಲದೆ ವಿದ್ವಾನ್ ಕೇಶವ್ ಅವರಿಂದ ಪ್ರವಚನ ಹಾಗೂ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.