ಉಡುಪಿ: ಶ್ರೀಕೃಷ್ಣ ಮಠದಲ್ಲಿ ತುಲಭಾರ ಕೌಂಟರ್ ಉದ್ಘಾಟನೆ

ಉಡುಪಿ: ಶ್ರೀಕೃಷ್ಣ ತುಲಾಭಾರ ಮಹೋತ್ಸವದ ಅಂಗವಾಗಿ ಭೀಮ ಜ್ಯೂವೆಲ್ಲರ್ಸ್‌ ಸಹಯೋಗದೊಂದಿಗೆ ಕೃಷ್ಣಮಠದಲ್ಲಿ ಆರಂಭಿಸಲಾಗಿರುವ ತುಲಾಭಾರ ಕೌಂಟರ್‌ ಅನ್ನು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಗುರುವಾರ ಉದ್ಘಾಟಿಸಿದರು.
ಶ್ರೀಕೃಷ್ಣ ದೇವರಿಗೆ ನಡೆಯಲಿರುವ ಚಿನ್ನದ ತುಲಾಭಾರ ಸೇವೆಯಲ್ಲಿ ಭಾಗಿಯಾಗಲು ಇಚ್ಛಿಸುವ ಭಕ್ತರಿಗೆ ಭೀಮ ಜ್ಯೂವೆಲ್ಲರ್ಸ್‌ ವತಿಯಿಂದ 100 ಮಿಲಿ ಗ್ರಾಂ, 200 ಮಿಲಿ ಗ್ರಾಂ, ಅರ್ಧ ಗ್ರಾಂ, ಒಂದು ಗ್ರಾಂ, ನಾಲ್ಕು ಗ್ರಾಂ ಹಾಗೂ ಎಂಟು ಗ್ರಾಂ ಚಿನ್ನದ ನಾಣ್ಯಗಳನ್ನು ತಯಾರಿಸಲಾಗಿದೆ. ಇವು ಕೃಷ್ಣಮಠದ ತುಲಾಭಾರ ಕೌಂಟರ್‌ನಲ್ಲಿ ಲಭ್ಯವಿದ್ದು, ಭಕ್ತಾದಿಗಳು ಇಲ್ಲಿಂದ ಖರೀದಿಸಿ ತುಲಾಭಾರ ಸೇವೆಗೆ ಸಮರ್ಪಿಸಬಹುದು ಎಂದು ಭೀಮ ಜ್ಯೂವೆಲ್ಲರ್ಸ್‌ನ ಸೀನಿಯರ್‌ ಮ್ಯಾನೇಜರ್‌ ಶ್ರೀಪತಿ ಭಟ್‌ ಹೇಳಿದರು.
ಮಠದ ಪಿಆರ್‌ಒ ಶ್ರೀಶ ಭಟ್‌ ಕಡೆಕಾರ್‌, ವಿದ್ವಾಂಸರಾದ ಪ್ರಭಂಜನ ಆಚಾರ್ಯ, ಗಿರೀಶ್ ಉಪಾಧ್ಯ, ಭೀಮ ಜ್ಯೂವೆಲ್ಲರ್ಸ್‌ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಎಸ್‌. ಮಹೇಶ್‌, ಕಸ್ಟರ್‌ ವಿಭಾಗದ ಮುಖ್ಯಸ್ಥ ಗುರುಪ್ರಸಾದ್‌, ಸಚಿನ್‌ ಶೇಟ್‌ ಮೊದಲಾದವರು ಇದ್ದರು.