ಮಣಿಪಾಲ: “ಶಿಕ್ಷಕರಿಗೆ 21 ಶತಮಾನದ ಕೌಶಲ್ಯಗಳು” ಶಿಕ್ಷಕರ ಕೌಶಲ್ಯ ಅಭಿವೃದ್ಧಿ ಕಾರ್ಯಗಾರವು ರೋಟರಿ ಐಸಿರಿ ಪರ್ಕಳ ಹಾಗೂ ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮಣಿಪಾಲ ಇವರ ಸಹಪ್ರಯೋಜಕತ್ವದಲ್ಲಿ ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್‍ನ ಆವರಣದಲ್ಲಿ ಸಂಪನ್ಮೂಲ ವ್ಯಕ್ತಿಯಾದ ರೋಟರಿ ಐಸಿರಿ ಪರ್ಕಳದ ರೊ. ಸ್ಮಿತಾ ಜಿ ಕಾಮತ್‍ರವರು ‘ಫೋರ್ ಸಿ’ಗಳ Critical thinking, Creativity, Communication and Collaboration (ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಸಂವಹನ ಮತ್ತು ಸಹಯೋಗ) ಬಗ್ಗೆ ಹಾಗೂ ಡಿಜಿಟಲ್ ಸಾಕ್ಷರತೆ, ಹೊಂದಿಕೊಳ್ಳುವಿಕೆ, ನಾಯಕತ್ವ ಮತ್ತು ನಿರಂತರ ಕಲಿಕೆಗೆ ಬದ್ಧತೆ. ತ್ವರಿತ ತಾಂತ್ರಿಕ ಮತ್ತು ಸಾಮಾಜಿಕ ಬದಲಾವಣೆಗಳನ್ನು ನ್ಯಾವಿಗೇಟ್ ಮಾಡಲು, ವೈವಿಧ್ಯಮಯ ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಮತ್ತು ಭವಿಷ್ಯದ ಯಶಸ್ಸಿಗೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸಂಕೀರ್ಣ ಸಾಮರ್ಥ್ಯಗಳನ್ನು ಬೆಳೆಸಲು ಶಿಕ್ಷಕರಿಗೆ ಈ ಕೌಶಲ್ಯಗಳು ಅತ್ಯಗತ್ಯ ಎಂದು ತಿಳಿಯಪಡಿಸಿದರು.

ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್‍ನ ಪ್ರಾಂಶುಪಾಲೆ ಶ್ರೀಮತಿ ಸುನೀತಾರವರು ಸಂಕ್ಷಿಪ್ತವಾಗಿ ಕಾರ್ಯಗಾರದ ಮಾಹಿತಿ ನೀಡಿ, ಸ್ವಾಗತಿಸಿ ಹಾಗೂ ವಂದಾನರ್ಪಣೆಗೈದರು.
ಕಾರ್ಯಕ್ರಮದಲ್ಲಿ ರೋಟರಿ ಐಸಿರಿ ಪರ್ಕಳದ ರೊ. ಗುರುಪ್ರಸಾದ್ ಕಾಮತ್ ಉಪಸ್ಥಿತರಿದ್ದರು. ಸುಮಾರು 25 ಶಿಕ್ಷಕರು ಕಾರ್ಯಾಗಾರದ ಸದುಪಯೋಗವನ್ನು ಪಡೆದರು.


















