ಉಡುಪಿ:ಶ್ರೀ ಶಾರದಾ ಟೀಚರ್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮಣಿಪಾಲ – ಡಿಪ್ಲೊಮಾ ಇನ್ ಮಾಂಟೆಸ್ಸರಿ ಚೆಲ್ಡ್ ಎಜ್ಯುಕೇಶನ್ ಪ್ರಮಾಣ ಪತ್ರ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ

ಉಡುಪಿ:ಮಣಿಪಾಲದ ಶ್ರೀ ಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಮಾಂಟೆಸ್ಸರಿ / ನರ್ಸರಿ ಟೀಚರ್ ಟ್ರೈನಿಂಗ್ (D.MEd) ಶಿಕ್ಷಕಿಯರ ತರಬೇತಿ ಪಡೆದ 2024-25 ಸಾಲಿನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಡಿಪ್ಲೊಮಾ ಪ್ರಮಾಣ ಪತ್ರ ವಿತರಣೆ ಮತ್ತು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭವು ಮಣಿಪಾಲದ ಕ್ರಿಸ್ಟಲ್ ಬಿಜ್ಹ್ ಹಬ್‌ನಲ್ಲಿ ದಿನಾಂಕ 2.08.2025ರಂದು, ಶ್ರೀಮತಿ ಚಂದ್ರಕಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪ್ರಾಂಶುಪಾಲರಾದ ಡಾ. ರೂಪಾ ಶೆಣೈ, ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿ, ಇವರು ಮಾತನಾಡಿ, ಎಳೆಯ ಮಕ್ಕಳ ಮನಸ್ಸನ್ನು ಅರಿತು, ಅವರಿಗೆ ವಿದ್ಯೆಯನ್ನು ಕೊಡುವುದರ ಬಗ್ಗೆ ತಿಳಿಸಿದರು.

ಇಚ್ಛೆ, ಜ್ಞಾನ ಮತ್ತು ಕ್ರಿಯೆ ಇವು ಮೂರೂ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸಿ ಮೊದಲು ಮಕ್ಕಳಲ್ಲಿ ಇಚ್ಛೆ ಹುಟ್ಟಿಸಿ ನಂತರ ಜ್ಞಾನದಾನ ಮಾಡಬೇಕು. ಹಾಗಾದರೆ ಮಾತ್ರ ಅವರಲ್ಲಿ ಆಸಕ್ತಿ ಹುಟ್ಟಿ ಅದು ಕ್ರಿಯಾಶಕ್ತಿಯಾಗಿ ಕೆಲಸ ಮಾಡುವುದು ಎಂದು ತಿಳಿಹೇಳಿದರು.

ವೇದಿಕೆಯಲ್ಲಿ ಸಂಸ್ಥೆಯ ಸಲಹಾ ಸಮಿತಿಯ ಡಾ. ಎನ್.ವಿ. ಕಾಮತ್‌ರವರು ಉಪಸ್ಥಿತರಿದ್ದರು. 2024-25ನೇ ಸಾಲಿನ ಡಿ.ಎಮ್.ಎಡ್ ಪರೀಕ್ಷೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಶಿಷ್ಟ ಶ್ರೇಣಿ ಪಡೆದುಕೊಂಡ ಶ್ರೀಮತಿ ವಂದನಾ ಕಿಣಿ ಮತ್ತು ಶ್ರೀಮತಿ ಅಶ್ವಿನಿ ಹಾಗೂ ಬೇರೆ ಬೇರೆ ವಿಭಾಗದಲ್ಲಿ ಮೊದಲ ಹತ್ತು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಉಪನ್ಯಾಸಕರಾದ ಶ್ರೀಮತಿ ದಿವ್ಯಾ ಕೋಟ್ಯಾನ್ ಹಾಗೂ ಶ್ರೀಮತಿ ಚೇತನಾರವರು ಪ್ರಮಾಣಪತ್ರ ವಿತರಣೆ ಕಾರ‍್ಯಕ್ರಮವನ್ನು ಹಾಗೂ ವಿದ್ಯಾರ್ಥಿನಿಯರಾದ ಧೃತಿ ಮತ್ತು ಸಹನಾ, ಸಮಾರಂಭದ ಕಾರ‍್ಯಕ್ರಮವನ್ನು ನಿರೂಪಿಸಿದರು. ಪ್ರಾಂಶುಪಾಲೆ ಶ್ರೀಮತಿ ಸುನೀತಾರವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.