ಉಡುಪಿ: ಉಡುಪಿ ಶ್ರೀಕೃಷ್ಣಮಠದಲ್ಲಿ ಕನ್ನಡ ನಾಮಫಲಕ ಹಾಕುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ.
ಆಡಿಯೋ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ ಅವರು, ಮಠದ ನವೀಕರಣ ವೇಳೆ ಪ್ಲಾಸ್ಟಿಕ್ ನಾಮಫಲಕದ ಬೋರ್ಡ್ ಗಳನ್ನು ತೆರವು ಮಾಡಲಾಗಿತ್ತು. ಇದೀಗ ಮರದ ನಾಮಫಲಕ ಬೋರ್ಡ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
ಕನ್ನಡಕ್ಕೆ ಆದ್ಯತೆ:
ಮಠದಲ್ಲಿ ಮೊದಲನೆದಾಗಿ ಕನ್ನಡ ನಾಮಫಲಕದ ಬೋರ್ಡ್ ಇರಲಿದೆ. ಬಳಿಕ ಸಂಸ್ಕೃತ ಹಾಗೂ ತುಳು ನಾಮಫಲಕದ ಬೋರ್ಡ್ ಇರಲಿದೆ. ಲಕ್ಷದೀಪೋತ್ಸವ ಇದ್ದ ಕಾರಣ ಕನ್ನಡದ ಬೋರ್ಡ್ ಅಳವಡಿಸಲು ಸ್ವಲ್ಪ ವಿಳಂಬವಾಗಿದೆ.
ಈಗಾಗಲೇ ಸಂಸ್ಕೃತ ಹಾಗೂ ತುಳು ಲಿಪಿಯ ಬೋರ್ಡ್ ಅಳವಡಿಸಲಾಗಿದೆ. ಕನ್ನಡ ಬೋರ್ಡ್ ಹಾಕುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಠದ ಗ್ರಂಥಗಳು ತುಳು, ಸಂಸ್ಕೃತ ಲಿಪಿಯಲ್ಲಿವೆ. ಹಾಗಾಗಿ ಕನ್ನಡದ ಜತೆಗೆ ಸಂಸ್ಕೃತ ಹಾಗೂ ತುಳುವಿಗೂ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.