ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯದ ವತಿಯಿಂದ ಹಮ್ಮಿಕೊಂಡ ಕೊರೊನಾ ಬಗ್ಗೆ ಜನಜಾಗೃತಿ ಮೂಡಿಸುವ ಕರಪತ್ರ ಹಂಚುವ ಅಭಿಯಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹಾಗೂ ಎಎಸ್ಪಿ ಕುಮಾರಚಂದ್ರ ಅವರಿಗೆ ಸೋಮವಾರ ಕರಪತ್ರ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು.
ಸಂಸ್ಥೆಯ ವತಿಯಿಂದ ಸುಮಾರು 5 ಸಾವಿರ ಕರಪತ್ರಗಳನ್ನು ನಗರದಾದ್ಯಂತ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಉಡುಪಿ ವಲಯ ಅಧ್ಯಕ್ಷ ಪ್ರಕಾಶ್ ಕೊಡಂಕೂರು, ಕಾರ್ಯದರ್ಶಿ ಸುಖೇಶ್ ಅಮೀನ್, ಗೌರವಾಧ್ಯಕ್ಷ ಶಿವ ಕೆ. ಅಮೀನ್, ಜಿಲ್ಲಾ ಸಂಘಟನೆಯ ಸಲಹಾ ಸಮಿತಿ ಸದಸ್ಯ ಜಯಕರ ಸುವರ್ಣ, ಜಿಲ್ಲಾ ಮಾಧ್ಯಮ
ವಕ್ತಾರ ಜನಾರ್ದನ್ ಕೊಡವೂರು, ವಲಯ ಸದಸ್ಯರಾದ ಮಹೇಶ್ ಸುವರ್ಣ, ಸಬೆಸ್ಟಿನ್ ಅಂಚನ್, ಸತೀಶ್ ಸೇರಿಗಾರ್ ಇದ್ದರು.