ನಿಮ್ಮ ಮಕ್ಕಳ ಭವಿಷ್ಯದ ಕನಸಿಗೆ ಬೆಳಕು ತೋರಿಸುತ್ತದೆ ಸ್ನೇಹ ಟ್ಯುಟೋರಿಯಲ್ ಕಾಲೇಜು: ಕಲಿಯುವ ವಿದ್ಯಾರ್ಥಿಗಳಿಗೆ ಒಂದೊಳ್ಳೆ ಅವಕಾಶವಿದು!

ಉಡುಪಿಯ ಪ್ರತಿಷ್ಠಿತ ಸ್ನೇಹ ಟ್ಯುಟೋರಿಯಲ್ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ರೂಪಿಸುವಲ್ಲಿ ಶ್ರಮಿಸುತ್ತಿದೆ. ಅತ್ಯುತ್ತಮ ಮತ್ತು ಕ್ರಿಯಾತ್ಮಕ ಬೋಧನಾ ಸಿಬ್ಬಂದಿಯ ಸಹಾಯದಿಂದ, ಈ ಸಂಸ್ಥೆಯು ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಉತ್ತಮ ಸಂಬಂಧವನ್ನು ಕಾಯ್ದುಕೊಂಡು ಅವರ ಭವಿಷ್ಯನ್ನು ರೂಪಿಸುತ್ತಿದೆ. ಇದೀಗ ಸ್ನೇಹ ಟ್ಯುಟೋರಿಯಲ್ ಕಾಲೇಜಿನಲ್ಲಿ ಸ್ಟುಡೆಂಟ್ ಕೇರ್ ತರಗತಿಗಳು ಮತ್ತು ವಿಶೇಷ ಆರೈಕೆ ತರಗತಿಗಳು ಪ್ರಾರಂಭವಾಗಿದ್ದು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಇದೊಂದು ಅದ್ಬುತ ಅವಕಾಶವಾಗಿದೆ.

ಸ್ಟುಡೆಂಟ್ ಕೇರ್ ತರಗತಿಗಳು:
ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ 1 ನೇ ತರಗತಿಯಿಂದ 10 ನೇ ತರಗತಿ, ಮತ್ತು I ಮತ್ತು II ಪಿಯುಸಿ ಹಂತದಲ್ಲಿ ಈ ಸ್ಟುಡೆಂಟ್ ಕೇರ್ ತರಗತಿಗಳನ್ನು ಸ್ನೇಹ ಟ್ಯುಟೋರಿಯಲ್ ಕಾಲೇಜು ನೀಡುತ್ತಿದೆ. ಶಾಲೆಗೆ ಹೋಗುವುದರ ಜೊತೆಗೆ ಉಳಿದ ಸಮಯದಲ್ಲಿ ವಿದ್ಯಾರ್ಥಿಗಳು ಇಲ್ಲಿ ವಿಶೇಷ ತರಗತಿಗಳನ್ನು ಪಡೆಯಬಹುದಾಗಿದೆ.

ತರಗತಿ ಸಮಯ: ಸಂಜೆ 4:30 ರಿಂದ ಸಂಜೆ 7.00 (ಸೋಮವಾರದಿಂದ ಶುಕ್ರವಾರ) ಮಧ್ಯಾಹ್ನ 2:00 ರಿಂದ ಸಂಜೆ 4:30 (ಶನಿವಾರ) (ಸರ್ಕಾರಿ ರಜಾದಿನಗಳಲ್ಲಿ ತರಗತಿಗಳಿಲ್ಲ)
ಪ್ರತೀ ವಿದ್ಯಾರ್ಥಿಗಳನ್ನು ಮನೆ ಮಕ್ಕಳಂತೆ ನೋಡಿಕೊಂಡು ಅವರ ಪ್ರಗತಿಗಾಗಿ ಶ್ರಮಿಸುವ ಕೆಲಸವನ್ನು ಸ್ನೇಹ ಟ್ಯುಟೋರಿಯಲ್ ಕಾಲೇಜು ವಿಶೇಷ ಆರೈಕೆ ಸ್ಪೆಷಲ್ ಕೇರ್ ತರಗತಿಗಳ ಮೂಲಕ ಮಾಡುತ್ತಿರುವುದು ವಿಶೇಷ. ನಿಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ನೀವು ಜಾಸ್ತಿ ಚಿಂತೆ ಮಾಡುವ ಅಗತ್ಯವಿಲ್ಲ. ಅವೆಲ್ಲವನ್ನೂ ಸ್ನೇಹ ಟ್ಯುಟೋರಿಯಲ್ ಕಾಲೇಜು ವಿಶೇಷ ಕಾಳಜಿ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತದೆ.

ಸಂಪರ್ಕಿಸಿ: ಸ್ನೇಹ ಟ್ಯುಟೋರಿಯಲ್ ಕಾಲೇಜು, ಶ್ರೀರಾಮ್ ಕಟ್ಟಡ, ಕಲ್ಸಂಕ, ಉಡುಪಿ
ದೂರವಾಣಿ: 0820-2530314, 9448376314