ಎಸ್ ಕೆ ಗೋಲ್ಡ್ ಸ್ಮಿತ್ ಕೋ-ಆಪರೇಟಿವ್ ಸೊಸೈಟಿ: ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಮಹಾನಗರ: ಎಸ್‌. ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್
ಕೋ – ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ವತಿಯಿಂದ 2024-2025ರ ಸಾಲಿನಲ್ಲಿ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಖಡ 75 ಕ್ಕಿಂತ ಹೆಚ್ಚು ಅಂಕ ಗಳಿಸಿದ ‘ಎ’ ವರ್ಗ ಮತ್ತು ‘ಸಿ’ ವರ್ಗದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ವಿದ್ಯಾರ್ಥಿಯವರ ಹೆತ್ತವರು ಮೇ 31, 2024 ರೊಳಗೆ ಸಂಘದ ಸದಸ್ಯರಾಗಿದ್ದಲ್ಲಿ ಮಾತ್ರ ತಮ್ಮ ಹತ್ತಿರದ ಶಾಖೆಯಿಂದ ಅರ್ಜಿ ನಮೂನೆಯನ್ನು ಪಡೆದುಕೊಂಡು ಜೂನ್‌ 30, 2025ರೊಳಗೆ ಅರ್ಜಿ ಸಲ್ಲಿಸಬಹುದು.

ನಿಗದಿತ ಅರ್ಜಿ ನಮೂನೆ ಹಾಗೂ ಮಾಹಿತಿಗೆ: ಪ್ರಧಾನ ವ್ಯವಸ್ಥಾಪಕರು, ಎಸ್‌.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ- ಆಪರೇಟಿವ್ ಸೊಸೈಟಿ ಲಿ., ವಿಶ್ವಸೌಧ, ರಾ.ಹೆ-66, ಕೊಟ್ಟಾರ ಚೌಕಿ, ಅಂಚೆ: ಅಶೋಕ ನಗರ, ಮಂಗಳೂರು -575006(ದ.ಕ.)