ಉಡುಪಿ: ಶೀರೂರು ಪರ್ಯಾಯಕ್ಕೆ ಶ್ರೀ‌ಕ್ಷೇತ್ರ ಧರ್ಮಸ್ಥಳದಿಂದ ಹೊರೆಕಾಣಿಕೆ.

ಉಡುಪಿ: ಶಿರೂರು ಪರ್ಯಾಯದ ಗೌರವಾಧ್ಯಕ್ಷರು ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ 50 ಕ್ವಿಂಟಲ್ ಸೋನಾ ಮಸೂರಿ ಅಕ್ಕಿ ಮತ್ತು 15 ಕ್ವಿಂಟಲ್ ತರಕಾರಿಯನ್ನು ಶ್ರೀ ಕೃಷ್ಣನ ಸನ್ನಿಧಾನಕ್ಕೆ ಸಲ್ಲಿಸಲಾಯಿತು. ಶೀರೂರು ಪರ್ಯಾಯದ ಮೊದಲ‌ದಿನದ ಹೊರೆಕಾಣಿಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ‌ಸಲ್ಲಿಕೆಯಾಗಿತ್ತು. ಇದೀಗ ಶ್ರೀ ಕ್ಷೇತ್ರದ ವತಿಯಿಂದ ಎರಡನೇ ಹೊರೆಕಾಣಿಕೆ ಸಲ್ಲಿಕೆಯಾಯಿತು. ಪರ್ಯಾಯ ಶಿರೂರು ಶ್ರೀ ವೇದವರ್ದನ ಶ್ರೀಪಾದಂಗಳವರು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಧರ್ಮಸ್ಥಳ ಅನ್ನಪೂರ್ಣ ಛತ್ರದ ಪ್ರಬಂಧಕ ಸುಬ್ರಮಣ್ಯ ಪ್ರಸಾದ್, ಮಠದ ದಿವಾನರಾದ ಉದಯ ಕುಮಾರ ಸರಳತ್ತಾಯ, ಹೊರೆಕಾಣಿಕೆ ಸಮಿತಿ ಸಂಚಾಲಕ ಸುಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಮೋಹನ್ ಭಟ್, ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ನಾಗರಾಜ್ ಶೆಟ್ಟಿ, ಯೋಜನಾಧಿಕಾರಿ ಸುರೇಂದ್ರ ನಾಯ್ಕ್, ದಿಲೀಪ್ ಜೈನ್, ಪ್ರಚಾರ ಸಮಿತಿಯ ನಂದನ್ ಜೈನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.